ಶಿವಮೊಗ್ಗ:ಸಿಎಎ ವಿರುದ್ಧ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು. ಆದರೆ, ಬಿಜೆಪಿಯ ಕಪಿಲ್ ಮಿಶ್ರಾ ಕೊಟ್ಟ ಪ್ರಚೋದನಕಾರಿ ಹೇಳಿಕೆಯಿಂದಾಗಿ ಹಿಂಸಾಚಾರ ನಡೆದಿದೆ ಎಂದು ಸಿಟಿಜನ್ ಯುನೈಡೆಟ್ ಮೂಮೆಂಟ್ ಸಂಘಟನೆಯ ಕಾರ್ಯದರ್ಶಿ ನಾಸೀರ್ ಅಹ್ಮದ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಕಪಿಲ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದೆಹಲಿ ಹಿಂಸಾಚಾರಕ್ಕೆ ಬಿಜೆಪಿಯ ಕಪಿಲ್ ಮಿಶ್ರಾ ಕಾರಣ: ನಾಸೀರ್ ಅಹ್ಮದ್ ಆರೋಪ
ಸಿಎಎ ವಿರುದ್ಧ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು. ಆದರೆ, ಬಿಜೆಪಿಯ ಕಪಿಲ್ ಮಿಶ್ರಾ ಕೊಟ್ಟ ಪ್ರಚೋದನಕಾರಿ ಹೇಳಿಕೆಯಿಂದಾಗಿ ಹಿಂಸಾಚಾರ ನಡೆದಿದೆ ಎಂದು ಸಿಟಿಜನ್ ಯುನೈಡೆಟ್ ಮೂಮೆಂಟ್ ಸಂಘಟನೆಯ ಕಾರ್ಯದರ್ಶಿ ನಾಸೀರ್ ಅಹ್ಮದ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಕಪಿಲ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಾರ್ಯದರ್ಶಿ ನಾಸೀರ್ ಅಹ್ಮದ್
ಫೆಬ್ರವರಿ 23ರಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಹೋರಾಟಕ್ಕೆ ಪ್ರಚೋದಿತ ಮಾತುಗಳು ಹಿಂಸಾಚಾರ ನಡೆಯಲು ಕಾರಣ ಎಂದು ಆರೋಪಿಸಿದರು. ಇದರಿಂದ ಅನೇಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಲಕ್ಷಾಂತರ ಆಸ್ತಿ ಹಾನಿಯಾಗಿದೆ. ಬಿಜೆಪಿ ಮುಖಂಡರು ನಡೆಸಿದ ಗಲಭೆಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ದೆಹಲಿ ಹೈಕೋರ್ಟ್ ಕೂಡಾ ಕಠಿಣ ಕ್ರಮಕ್ಕೆ ಸೂಚಿಸಿದೆ ಎಂದರು.
ಮುಜಾಹೀದ್ ಸಿದ್ದಿಕಿ, ನಿಸಾರ್ ಅಹ್ಮದ್, ಮುಜಾಮಿಲ್ ಅಹ್ಮದ್ ಸುದ್ದಿಗೋಷ್ಠಿಯಲ್ಲಿದ್ದರು.
Last Updated : Feb 28, 2020, 11:19 PM IST