ಕರ್ನಾಟಕ

karnataka

ETV Bharat / state

ಶಿವಮೊಗ್ಗ ನಗರದಲ್ಲಿ ಪೊಲೀಸರಿಂದ ಪಥ ಸಂಚಲನ: ಕಿಡಿಗೇಡಿಗಳಿಗೆ ಎಚ್ಚರಿಕೆಯ ಸಂದೇಶ - ಶಿವಮೊಗ್ಗದಲ್ಲಿ ನಿನ್ನೆ ನಡೆದ ಘಟನೆ

ಶಿವಮೊಗ್ಗದಲ್ಲಿ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಸುಮಾರು ಒಂದು ಸಾವಿರ ಪೊಲೀಸರು ಪಥ ಸಂಚಲನ ನಡೆಸಿದರು.

police-routemarch-at-shivamogga
ಶಿವಮೊಗ್ಗ ನಗರದಲ್ಲಿ ಪೊಲೀಸರಿಂದ ಪಥ ಸಂಚಲನ: ಕಿಡಿಗೇಡಿಗಳಿಗೆ ಖಡಕ್ ಸಂದೇಶ

By

Published : Oct 25, 2022, 9:31 PM IST

ಶಿವಮೊಗ್ಗ: ನಗರದಲ್ಲಿಂದು ಸಂಜೆ ಜಿಲ್ಲಾ ಪೊಲೀಸರು ಪಥ ಸಂಚಲನ ನಡೆಸಿದರು. ನಿನ್ನೆ ಭರ್ಮಪ್ಪನಗರ ಹಾಗೂ ಸೀಗೆಹಟ್ಟಿಯಲ್ಲಿ ನಡೆದ ಎರಡು ಘಟನೆಯಿಂದ ಇಲ್ಲಿನ ಜನ ಭಯಭೀತರಾಗಿದ್ದರು. ಜನರ ಭಯ ಹೋಗಲಾಡಿಸಲು ಮತ್ತು ಕಿಡಿಗೇಡಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ಈ ಪಥ ಸಂಚಲನ ನಡೆಸಲಾಗಿದೆ.

ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಪಥ ಸಂಚಲನ ಕೆ.ಆರ್.ಪುರಂನಿಂದ ಆಜಾದ್ ನಗರ, ಸೀಗೆಹಟ್ಟಿಯ ಅಮೀರ್​ ಅಹಮದ್ ವೃತ್ತದಿಂದ ಗಾಂಧಿ ಬಜಾರ್ ಮಾರ್ಗವಾಗಿ ಸಾಗಿತು. ಎಸ್ಪಿ ಸೇರಿದಂತೆ ಸುಮಾರು ಒಂದು ಸಾವಿರ ಪೊಲೀಸರು ಭಾಗಿಯಾಗಿದ್ದರು.

ಇದನ್ನೂ ಓದಿ :ಶಾಂತಿ ಕದಡುವವರನ್ನು ಬಂಧಿಸಿ ಕಾನೂನು ಕ್ರಮ: ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details