ಕರ್ನಾಟಕ

karnataka

ETV Bharat / state

ಪರಿಸರ ಉಳಿಸಲು ಗಿಡ ನೆಡಿ, ಆರೋಗ್ಯ ಕಾಪಾಡಲು ಕ್ರೀಡೆ ಆಡಿ

ಪರಿಸರ ಉಳಿಸಲು ಗಿಡ ನೆಡಿ, ಆರೋಗ್ಯ ಕಾಪಾಡಲು ಕ್ರೀಡೆ ಆಡಿ ಎನ್ನುವ ಸಂದೇಶದೊಂದಿಗೆ ಶಿವಮೊಗ್ಗ ಜಿಲ್ಲಾ ಮೆಗ್ಗಾನ್​ ಆಸ್ಪತ್ರೆಯ ಬೋಧಕ ನೌಕರರು ಕ್ರಿಕೆಟ್​ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದರು. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಎಲ್ಲಾ ಏಳು ತಾಲೂಕು ಆಸ್ಪತ್ರೆಯ ನೌಕರರ ತಂಡಗಳು ಭಾಗವಹಿಸಿದ್ದವು.

By

Published : Jun 9, 2019, 11:22 PM IST

ಪರಿಸರ ಉಳಿಸಲು ಗಿಡ ನೆಡಿ, ಆರೋಗ್ಯ ಕಾಪಾಡಲು ಕ್ರೀಡೆ ಆಡಿ

ಶಿವಮೊಗ್ಗ:ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೆಗ್ಗಾನ್ ಕಪ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಜಿಲ್ಲಾ ಮೆಗ್ಗಾನ್​ ಆಸ್ಪತ್ರೆಯ ಬೋಧಕ ನೌಕರರ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಸದಾ ಒತ್ತಡದಲ್ಲಿ ಇರುವ ನೌಕರರು ಗಿಡ ನೆಟ್ಟು ಕ್ರಿಕೆಟ್ ಆಡುವ ಮೂಲಕ ಒತ್ತಡದಿಂದ ದೂರಾಗಿ ಎಂಜಾಯ್ ಮಾಡಿದರು. ಪರಿಸರ ಉಳಿಸಲು ಗಿಡ ನೆಡಿ, ಆರೋಗ್ಯ ಕಾಪಾಡಲು ಕ್ರೀಡೆ ಆಡಿ ಎನ್ನುವ ಸಂದೇಶದೊಂದಿಗೆ ಈ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಎಲ್ಲಾ ಏಳು ತಾಲೂಕು ಆಸ್ಪತ್ರೆಯ ನೌಕರರ ತಂಡಗಳು ಭಾಗವಹಿಸಿದ್ದವು. ಪ್ರತಿ ದಿನವು ತಮ್ಮ ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕೆಲಸದ ನಡುವೆಯೂ ಇಂತಹ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ಮೂಲಕ ರಿಲ್ಯಾಕ್ಸ್ ಮೂಡ್​ನಲ್ಲಿ ಎಂಜಾಯ್ ಮಾಡಿದ್ರು.

ಪರಿಸರ ಉಳಿಸಲು ಗಿಡ ನೆಡಿ, ಆರೋಗ್ಯ ಕಾಪಾಡಲು ಕ್ರೀಡೆ ಆಡಿ

ಇದೇ ವೇಳೆ ಮಾತನಾಡಿದ ಮೆಗ್ಗಾನ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ನಾಗೇಂದ್ರ, ಇಲ್ಲಿನ ಸಿಬ್ಬಂದಿ ತಮ್ಮ ಒತ್ತಡವನ್ನ ಕಡಿಮೆ ಮಾಡಿಕೊಂಡು ಕೆಲಸ ನಿರ್ವಹಿಸಲು ಒಂದು ದಿನವಾದ್ರೂ ಇಂತಹ ಪಂದ್ಯಾವಳಿಗಳನ್ನ ಆಯೋಜಿಸುವುದು ತುಂಬ ಅವಶ್ಯಕ ಎಂದರು.

ABOUT THE AUTHOR

...view details