ಶಿವಮೊಗ್ಗ:ಶಾಲೆಯಲ್ಲಿ ಆಟ ಆಡುವಾಗ ಪ್ರಜ್ಞೆ ತಪ್ಪಿ ಬಿದ್ದ ಬಾಲಕ ಮತ್ತೆ ಕಣ್ಣು ತೆರೆಯಲೇ ಇಲ್ಲ. ಪುಟ್ಟ ಮಗನ ಅಗಲಿಕೆಯ ನೋವಿನಲ್ಲೂ ಸಹ ಆತನ ಕುಟುಂಬದವರು ಬಾಲಕನ ಕಣ್ಣು ದಾನ ಮಾಡುವ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಸವಾಪುರ ಹಾರೋಹಿತ್ತಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಾಲಕ ಆರ್ಯನ್ (7) ಎರಡನೇ ತರಗತಿ ಓದುತ್ತಿದ್ದ. ಈತನ ತಾಯಿ ಅದೇ ಶಾಲೆಯಲ್ಲಿ ಬಿಸಿಯೂಟ ತಯಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಕೂಲಿ ಕೆಲಸ ಮಾಡುತ್ತಾರೆ. ಗುರುವಾರ ಬೆಳಗ್ಗೆ ಶಾಲೆಯಲ್ಲಿ ಆಟವಾಡುತ್ತಿದ್ದ ಆರ್ಯನ್ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದ.