ಶಿವಮೊಗ್ಗ:ನಗರದಲ್ಲಿ ಭಾನುವಾರ ರಾತ್ರಿ ಭೀಕರವಾಗಿ ಕೊಲೆಗೀಡಾದ ಭಜರಂಗದಳದ ಕಾರ್ಯಕರ್ತ ಹರ್ಷ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಭೇಟಿ ನೀಡಿ ಆತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಗರದ ಭಾರತಿ ಕಾಲೋನಿಯಲ್ಲಿರು ಹರ್ಷ ನಿವಾಸಕ್ಕೆ ಇಂದು ಸಂಜೆ ಭೇಟಿ ನೀಡಿದ್ದ ಸಚಿವರು, ಕೊಲೆಯಾದ ಹರ್ಷನ ತಂದೆ ಹಾಗೂ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.
ನಿಮ್ಮ ಕುಟುಂಬಸ್ಥರ ಜೊತೆ ನಮ್ಮ ರಾಜ್ಯ ಸರ್ಕಾರ ಇರುತ್ತದೆ. ನಿಮ್ಮ ಕುಟುಂಬಕ್ಕೆ ಎಲ್ಲಾ ನೆರವು ನೀಡುತ್ತೇವೆ. ಹರ್ಷನನ್ನು ಕೊಲೆ ಮಾಡಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು.
ಸಚಿವ ನಾರಾಯಣ ಗೌಡರು ಇಂದು ಜಿಲ್ಲೆಯಲ್ಲಿ ತಂಗಲಿದ್ದು, ನಾಳೆ ನಗರದ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.
ಇದನ್ನೂ ಓದಿ: ರೋಟರಿ ಚಿತಾಗಾರದಲ್ಲಿ ಹರ್ಷ ಅಂತ್ಯಕ್ರಿಯೆ: ಈಶ್ವರಪ್ಪ, ಸಂಸದ ರಾಘವೇಂದ್ರ ಭಾಗಿ