ಶಿವಮೊಗ್ಗ : ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹಾಗೂ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಮೊದಲು ನೇರ ಚುನಾವಣೆಯಲ್ಲಿ ಗೆದ್ದು, ನಂತರ ಶಿವಮೊಗ್ಗದ ಟಿಕೆಟ್ ಬಗ್ಗೆ ಮಾತನಾಡಲಿ ಎಂದು ಸಚಿವ ಕೆ. ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ಬಿ.ಕೆ.ಹರಿಪ್ರಸಾದ್, ಸಿಎಂ ಇಬ್ರಾಹಿಂ ನೇರ ಚುನಾವಣೆಯಲ್ಲಿ ಗೆದ್ದು ಬರಲಿ: ಈಶ್ವರಪ್ಪ ಸವಾಲು
ವಿಧಾನ ಪರಿಷ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು 224 ಕ್ಷೇತ್ರದಲ್ಲಿ ಯಾವುದಾದರು ಒಂದು ಕ್ರೇತ್ರದಲ್ಲಿ ನಿಂತು ಗೆದ್ದು ಬರಲಿ. ಅವರು ಮೇಜರ್ ಆದಾಗಿನಿಂದ ಒಂದೇ ಒಂದು ನೇರ ಚುನಾವಣೆಯಲ್ಲಿ ಟಿಕೆಟ್ ತೆಗೆದುಕೊಳ್ಳಲು ಯೋಗ್ಯತೆ ಇಲ್ಲದ ಅವರಿಗೆ ಶಿವಮೊಗ್ಗದ ಸೀಟು ಹಂಚಿಕೆಯ ಅಧಿಕಾರ ಕೊಟ್ಟವರು ಯಾರು ಸಚಿವ ಈಶ್ವರಪ್ಪ ಗರಂ ಆದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಂಚೆ ರಾಜ್ಯದ ಯಾವುದಾದರು ಕ್ಷೇತ್ರದಲ್ಲಿ ಸೀಟು ತೆಗೆದುಕೊಳ್ಳುವ ಶಕ್ತಿ ಬಿ.ಕೆ. ಹರಿಪ್ರಸಾದ್ರವರಿಗೆ ಇದೆಯೇ ನೋಡಿ ಎಂದು ಪ್ರಶ್ನಿಸಿದರು. ಬಿ.ಕೆ. ಹರಿಪ್ರಸಾದ್ ರವರು 224 ಕ್ಷೇತ್ರದಲ್ಲಿ ಯಾವುದಾದರು ಒಂದು ಕ್ರೇತ್ರದಲ್ಲಿ ನಿಂತು ಗೆದ್ದು ಬರಲಿ. ಅವರು ಮೇಜರ್ ಆದಾಗಿನಿಂದ ಒಂದೇ ಒಂದು ನೇರ ಚುನಾವಣೆಯಲ್ಲಿ ಟಿಕೆಟ್ ತೆಗೆದುಕೊಳ್ಳಲು ಯೋಗ್ಯತೆ ಇಲ್ಲದ ವ್ಯಕ್ತಿ. ಅವರಿಗೆ ಶಿವಮೊಗ್ಗದ ಬಿಜೆಪಿ ಸೀಟು ಹಂಚಿಕೆಯ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದರು. ಮೊದಲು ಕಾಂಗ್ರೆಸ್ ನಲ್ಲಿ ಜಿ.ಪಂ, ತಾ.ಪಂ ಅಥವಾ ಎಂಎಲ್ಎ ಸೀಟು ತೆಗೆದುಕೊಂಡು ಗೆದ್ದು ತೋರಿಸಿ. ನೀವು ಯಾವತ್ತೂ ಹಿಂಬಾಗಿಲ ರಾಜಕಾರಣ ಮಾಡಿಕೊಂಡು ಬಂದವರು. ನಿಮಗೆ ನಮ್ಮ ಬಗ್ಗೆ ಮಾತನಾಡಲು ಅಧಿಕಾರವೇ ಇಲ್ಲ ಎಂದು ಗುಡುಗಿದರು.
ಸಿಎಂ ಇಬ್ರಾಹಿಂ ಕುರಿತು ಏಕ ವಚನದಲ್ಲೇ ವಾಗ್ದಾಳಿ ನಡೆಸಿದ ಈಶ್ವರಪ್ಪ, ಅವನ್ಯಾರು ನನಗೆ ಕೇಲೋದಕ್ಕೆ, ಅವರಿಗೆ ಯೋಗ್ಯತೆ ಇದ್ರೆ, ಕಾಂಗ್ರೆಸ್ ನಿಂದ ಗೆದ್ದು ಬರಲಿ. ದೆಹಲಿನಲ್ಲಿ ದೇವೇಗೌಡರ ಕೃಪಾಶೀರ್ವಾದದಿಂದ ಗೆದ್ದು ಬಂದು ಮಂತ್ರಿಯಾದರು. ಕರ್ನಾಟಕದಲ್ಲಿ ಎಂಎಲ್ಸಿ ಆಗಿ ಮಾಡಬಾರದು ಮಾಡಿ, ಆಗ ಎ.ಕೆ. ಸುಬ್ಬಯ್ಯ ನವರು ಸದನದಲ್ಲಿ ಚರ್ಚೆ ನಡೆಸಿದಾಗ ನೀವು ತಪ್ಪು ಮಾಡಿದ್ದಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಿರಿ ಎಂದು ಈಶ್ವರಪ್ಪ ಹರಿಹಾಯ್ದರು.