ಕರ್ನಾಟಕ

karnataka

ETV Bharat / state

ಮೀಸಲು ಬದಲಾವಣೆ : ಶಿವಮೊಗ್ಗದಲ್ಲಿ ಜಿ.ಪಂ ಕ್ಷೇತ್ರ ಕಳೆದುಕೊಂಡ ಘಟಾನುಘಟಿಗಳು

ಜಿ.ಪಂ ಚುನಾವಣೆಗೂ ಮೊದಲು ಚುನಾವಣಾ ಆಯೋಗ ಕ್ಷೇತ್ರಗಳ ಮೀಸಲು ಬದಲಾಯಿಸಿದ್ದು, ಇದು ಹಲವು ಪ್ರಮುಖ ನಾಯಕರ ಆಸೆಗೆ ತಣ್ಣೀರೆರಚಿದೆ. ಹೊಸ ಮೀಸಲು ಪ್ರಕಾರ ಶಿವಮೊಗ್ಗದ ಪ್ರಮುಖರು ತಮ್ಮ ಕ್ಷೇತ್ರ ಕಳೆದುಕೊಂಡಿದ್ದಾರೆ.

leaders lost ZP Constituency
ಘಟಾನುಘಟಿಗಳಿಗೆ ನಿರಾಸೆ

By

Published : Jul 6, 2021, 7:59 AM IST

ಶಿವಮೊಗ್ಗ : ಜಿಲ್ಲಾ ಪಂಚಾಯತ್​ ಕ್ಷೇತ್ರಗಳ ಮೀಸಲು ಬದಲಿಸಿ ಚುನಾವಣಾ ಆಯೋಗವು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಇದರಿಂದಾಗಿ ಶೇ.80-90ರಷ್ಟು ಕ್ಷೇತ್ರಗಳಲ್ಲಿ ಈಗಿರುವ ಸದಸ್ಯರಿಗೆ ಜಿಲ್ಲಾ ಪಂಚಾಯತ್ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ. ಜಿ.ಪಂನ ಹಲವು ಹಾಲಿ ಸದಸ್ಯರು ಸ್ಪರ್ಧೆಯ ಅವಕಾಶವನ್ನೇ ಕಳೆದುಕೊಳ್ಳಲಿದ್ದಾರೆ.

ಜಿಲ್ಲೆಯ ಘಟಾನುಘಟಿಗಳ ಕ್ಷೇತ್ರಗಳಲ್ಲೂ ಮೀಸಲು ಬದಲಾಗಿದೆ. ಇದರಿಂದಾಗಿ ಅವರು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಜಿ.ಪಂ ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ಎಸ್. ಪ್ರಕಾಶ್ ಅವರಿಗೂ ತಮ್ಮ ಕ್ಷೇತ್ರ ಕೈ ತಪ್ಪಿದೆ. ಈ ಹಿಂದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರವು, ಈಗ ಎಸ್‌ಸಿ ಮಹಿಳೆ ಪಾಲಾಗಿದೆ.

ಹೀಗಾಗಿ, ಜ್ಯೋತಿ ತಮ್ಮ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.

ಅದೇ ರೀತಿ, ನಿಕಟ ಪೂರ್ವ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಅವರು ಪ್ರತಿನಿಧಿಸಿದ್ದ ಹಸೂಡಿ ಕ್ಷೇತ್ರ ಈ ಹಿಂದೆ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಈಗ ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ. ಹೀಗಾಗಿ, ಈ ಕ್ಷೇತ್ರದಿಂದ ವಿಜಯ್ ಕುಮಾರ್ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.

ಓದಿ : ಸಿಎಂ ತವರು ಜಿಲ್ಲೆಯಲ್ಲೇ ಜಿಪಂ, ತಾಪಂ ಚುನಾವಣಾ ಮೀಸಲಾತಿಗೆ ವಿರೋಧ..

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಅವರು ಪ್ರತಿನಿಧಿಸುತಿದ್ದ ಹೊಳಲೂರು ಕ್ಷೇತ್ರವು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಹೀಗಾಗಿ, ಅವರು ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಕಲಗೋಡು ರತ್ನಾಕರ್ ಅವರಿಗೂ ಕ್ಷೇತ್ರ ಇಲ್ಲವಾಗಿದೆ. ಆದರೆ, ಈ ಹಿಂದೆ ಪ್ರತಿನಿಧಿಸಿದ್ದ ರಿಪ್ಪನ್‌ಪೇಟೆ ಕ್ಷೇತ್ರ ಸಾಮಾನ್ಯ ವರ್ಗದ ಪಾಲಾಗಿರುವುದರಿಂದ ಬಂಡಿರಾಮಚಂದ್ರ ಹಾಗೂ ರತ್ನಾಕರ್ ನಡುವೆ ಟಿಕೆಟ್ ಫೈಟ್ ಏರ್ಪಡುವ ಸಾಧ್ಯತೆ ಇದೆ.

ಹುಂಚ ಕ್ಷೇತ್ರವು ಬಿಸಿಎಂ-ಎ ಮಹಿಳೆಗೆ ಮೀಸಲಿಟ್ಟಿದ್ದು, ಶ್ವೇತಾ ಬಂಡಿ ಅವರಿಗೆ ಸ್ಪರ್ಧೆಯ ಅವಕಾಶ ಇದೆ. ನಗರ ಕ್ಷೇತ್ರವನ್ನು ಎಸ್‌ಸಿ ಮಹಿಳೆಗೆ ಮೀಸಲು ಇಟ್ಟಿದ್ದು, ಸುರೇಶ್ ಸ್ವಾಮಿರಾವ್ ಅವರಿಗೆ ಕ್ಷೇತ್ರವೇ ಇಲ್ಲದಂತಾಗಿದೆ. ಬಿಜೆಪಿ ನಾಯಕ ಭಾನುಪ್ರಕಾಶ್ ಅವರ ಪುತ್ರ ಕಣ್ಣಿಟ್ಟಿದ್ದ ಗಾಜನೂರು ಕ್ಷೇತ್ರ ಎಸ್‌ಸಿ ಮಹಿಳೆಯ ಪಾಲಾಗಿದೆ. ಹೀಗಾಗಿ, ಅವರಿಗೂ ನಿರಾಸೆಯಾಗಿದೆ.

ಅದೇ ರೀತಿ, ಹಾರನಹಳ್ಳಿಯಲ್ಲೂ ಅಭ್ಯರ್ಥಿಗಳಿಗೆ ಇದೇ ರೀತಿಯ ಸಮಸ್ಯೆಯಾಗಿದ್ದು, ಅವರು ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುವಂತಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹೊಸನಗರ ಕ್ಷೇತ್ರವು ವಿಲೀನಗೊಂಡ ಪರಿಣಾಮ ಕಲಗೋಡು ರತ್ನಾಕರ್ ಅವರಿಗೆ ಕ್ಷೇತ್ರ ಬದಲಿಸುವ ಸವಾಲು ಎದುರಾಗಿದೆ. ಆನವೇರಿ ಕ್ಷೇತ್ರದಿಂದ ವೀರಭದ್ರ ಪೂಜಾರಿ ಅವರು ಸದಸ್ಯರಾಗಿದ್ದರು. ಈಗ ಇದು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಅವರಿಗೆ ಪುನರ್ ಸ್ಪರ್ಧಿಸುವ ಅವಕಾಶವಿದೆ.

ಲಿಂಗಾಪುರ ಕ್ಷೇತ್ರವು ಬಿಸಿಎಂ-ಎ ಮಹಿಳೆಗೆ ಮೀಸಲಾಗಿರುವ ಕಾರಣ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಕಾಸರವಳ್ಳಿ ಶ್ರೀನಿವಾಸ್ ಅವರಿಗೆ ಅವಕಾಶ ಕೈತಪ್ಪಿದೆ. ಕೂಡ್ಲಿಗೆರೆಯಿಂದ ಜಿ.ಪಂ ಪ್ರತಿನಿಧಿಸಿದ್ದ ಮಣಿಶೇಖರ್, ಸಿಂಗನಮನೆ ಕ್ಷೇತ್ರದ ಜೆ.ಪಿ.ಯೋಗೇಶ್ ಅವರು ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ.

ABOUT THE AUTHOR

...view details