ಕರ್ನಾಟಕ

karnataka

ETV Bharat / state

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಧು ಬಂಗಾರಪ್ಪ ಮತಯಾಚನೆ - ಮಧು ಬಂಗಾರಪ್ಪ

ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರತಿಯೊಬ್ಬ ವಕೀಲರನ್ನು ವೈಯಕ್ತಿಕವಾಗಿ ಮಾತನಾಡಿಸಿಕೊಂಡು ಈ ಬಾರಿ ತನಗೆ ಮತ ಹಾಕುವಂತೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಮನವಿ ಮಾಡಿಕೊಂಡರು.

ಮತಯಾಚನೆ

By

Published : Apr 11, 2019, 5:29 PM IST

ಶಿವಮೊಗ್ಗ: ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮತಯಾಚನೆ ನಡೆಸಿದರು.

ವಕೀಲರ ಭವನದಲ್ಲಿ ಪ್ರತಿಯೊಬ್ಬ ವಕೀಲರನ್ನು ವೈಯಕ್ತಿಕವಾಗಿ ಮಾತನಾಡಿಸಿಕೊಂಡು ಈ ಬಾರಿ ತನಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು. ಈ ವೇಳೆ ಅನೇಕ ವಕೀಲರು ಮಧುರವರಿಗೆ ಸಾಥ್ ನೀಡಿದರು.

ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಮತಯಾಚನೆ

ನಂತರ ಮಾತನಾಡಿದ ಅವರು, ನಮ್ಮ ತಂದೆ ವಕೀಲಗಿರಿ ಮಾಡಿಕೊಂಡೇ ರಾಜಕೀಯಕ್ಕೆ ಬಂದಿದ್ದರು. ಇದರಿಂದ ನನಗೆ ಇಲ್ಲಿ ಹೆಚ್ಚಿನ ಮತ ಬರುವ ಸಾಧ್ಯತೆ ಇದೆ. ನಮ್ಮ ತಂದೆಯ ಕಾಲದಲ್ಲಿ ವಕೀಲರ ಭವನಕ್ಕೆ ಅನುದಾನ ನೀಡಿದ್ರು. ನಾನು ಸಹ ನನ್ನ ವೈಯಕ್ತಿದ ದೇಣಿಗೆಯನ್ನು ನೀಡಿದ್ದೇನೆ. ಇಲ್ಲಿ ನನಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ABOUT THE AUTHOR

...view details