ಕರ್ನಾಟಕ

karnataka

By

Published : Jul 2, 2020, 5:22 PM IST

Updated : Jul 2, 2020, 7:18 PM IST

ETV Bharat / state

ಶಿವಮೊಗ್ಗದಲ್ಲಿ ಕಂಟೈನ್ಮೆಂಟ್​​​​​​ ಝೋನ್​​ಗಳ ಸಂಖ್ಯೆ ಹೆಚ್ಚಳ: ಹಲವು ಪ್ರದೇಶಗಳು ಸೀಲ್​ ಡೌನ್​​

ಶಿವಮೊಗ್ಗದ ಪೆನ್ಷನ್ ಮೊಹಲ್ಲಾದಲ್ಲಿ ಇಂದು ಓರ್ವ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದ ಹಿನ್ನೆಲೆ ಸೀಲ್​ ಡೌನ್ ಮಾಡಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಕಂಟೈನ್ಮೆಂಟ್​​​​ ಝೋನ್​​ಗಳ ಸಂಖ್ಯೆ 25ಕ್ಕೆ ಏರಿದೆ.

ಪೆನ್ಶನ್ ಮೊಹಲ್ಲಾದಲ್ಲಿ ಬ್ಯಾರಿಕೇಡ್ ಹಾಕಿ ಸೀಲ್​ಡೌನ್
ಪೆನ್ಶನ್ ಮೊಹಲ್ಲಾದಲ್ಲಿ ಬ್ಯಾರಿಕೇಡ್ ಹಾಕಿ ಸೀಲ್​ಡೌನ್

ಶಿವಮೊಗ್ಗ:ನಗರದಲ್ಲಿ ಇಂದು ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಪೆನ್ಷನ್​ ಮೊಹಲ್ಲಾದಲ್ಲಿ ಬ್ಯಾರಿಕೇಡ್ ಹಾಕಿ ಸೀಲ್​ ಡೌನ್ ಮಾಡಿ ರಸ್ತೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ.

ಶಿವಮೊಗ್ಗದಲ್ಲಿ ಕಂಟೈನ್ಮೆಂಟ್​​​​​​ ಝೋನ್​​ಗಳ ಸಂಖ್ಯೆ ಹೆಚ್ಚಳ

ಆಶೋಕನಗರ ಮೊದಲನೇ ಅಡ್ಡರಸ್ತೆ ಹಾಗೂ ಗೋಪಾಳದ ಆದಿ ರಂಗನಾಥ ದೇವಾಲಯ ರಸ್ತೆಯನ್ನು ಸಹ ಸೀಲ್​ ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಯಾನಿಟೈಸ್ ಮಾಡುತ್ತಿದ್ದಾರೆ. ಸೀಲ್​​ ಡೌನ್ ಪ್ರದೇಶದಲ್ಲಿರುವ ಮನೆಗಳು, ಮಳಿಗೆ ಗೋಡೆ, ಬಾಗಿಲು, ಆವರಣದಲ್ಲಿ ಸಹ ಸ್ಯಾನಿಟೈಸ್ ಮಾಡಲಾಗುತ್ತಿದೆ.

ಕೊರೊನಾ ಪಾಸಿಟಿವ್ ಕಂಡು ಬಂದ ಭದ್ರಾವತಿಯ ಕೂಡ್ಲಿಗೆರೆ ಹಾಗೂ ಶಿವಮೊಗ್ಗ ತಾಲೂಕಿನ ಬೇಡರ ಹೊಸಹಳ್ಳಿಯನ್ನೂ ಸೀಲ್​ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಕಂಟೈನ್ಮೆಂಟ್​​​​ ಝೋನ್​​ಗಳ ಸಂಖ್ಯೆ 25ಕ್ಕೆ ಎರಿಕೆಯಾಗಿದೆ.

Last Updated : Jul 2, 2020, 7:18 PM IST

ABOUT THE AUTHOR

...view details