ಕರ್ನಾಟಕ

karnataka

ETV Bharat / state

ರಾಜ್ಯದೆಲ್ಲೆಡೆ ಮಾದಕ ವಸ್ತುಗಳನ್ನು ಮಟ್ಟಹಾಕಲು ಸೂಚನೆ: ಗೃಹ ಸಚಿವ ಆರಗ ಜ್ಞಾನೇಂದ್ರ - shimogha news

ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ಜಾಲವನ್ನು ಮಟ್ಟ ಹಾಕಬೇಕು ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

minister araga jnanendra reaction on drug Abolition
ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

By

Published : Aug 16, 2021, 5:42 PM IST

ಶಿವಮೊಗ್ಗ:ಮಾದಕ ವಸ್ತುಗಳು ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಇದೆ. ಇದನ್ನು ಜಪ್ತಿ ಮಾಡುವ ಹಾಗೂ ಮಟ್ಟ ಹಾಕುವ ಕಾರ್ಯ ನಿರಂತರವಾಗಿರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಶಿಕಾರಿಪುರದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳು ಶಿವಮೊಗ್ಗ ಜಿಲ್ಲೆ ಸೇರಿದಂತೆ ಬೆಂಗಳೂರು, ಮಂಗಳೂರು ಎಲ್ಲಾ ಕಡೆ ಇದೆ. ರಾಜ್ಯದಲ್ಲಿ ಮಾದಕ ವಸ್ತುಗಳನ್ನು ಮಟ್ಟ ಹಾಕಬೇಕು ಅಂತ ಮೊದಲ ಸಭೆಯಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದ್ರು.

ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಹತ್ತು ಟನ್​ಗೂ ಅಧಿಕ ಪ್ರಮಾಣದ ಮಾದಕ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿ ಸುಟ್ಟು ಹಾಕಿದ್ದಾರೆ. ಈ ಮಾದಕ ವಸ್ತುಗಳನ್ನು ಹಾಗೇ ಬಿಟ್ಟಿದ್ದರೆ ಏನೇನೋ ಅನಾಹುತಗಳು ನಡೆಯುತ್ತಿದ್ದವು ಎಂದ್ರು.

ಅಕ್ರಮ ವಲಸಿಗರನ್ನು ಹೊರಹಾಕಲಾಗುವುದು:

ರಾಜ್ಯದ ಎಲ್ಲಾ ಕಡೆ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ರಾಜ್ಯದಿಂದ ಹೊರ ಹಾಕಲಾಗುವುದು. ಈ ಕುರಿತು ಅಧಿಕಾರಿಗಳ ಜೊತೆ ಮಾತನಾಡಿರುವುದಾಗಿ ಗೃಹ ಸಚಿವರು ತಿಳಿಸಿದ್ರು.

ರಸ್ತೆಯಲ್ಲಿ ನಿಲ್ಲಿಸಿ ವಾಹನ ಸವಾರರಿಗೆ ದಂಡ ಹಾಕುವುದರಿಂದ ಇತರರಿಗೆ ಕಿರಿಕಿರಿ ಆಗುತ್ತದೆ ಎಂಬ ಉದ್ದೇಶದಿಂದ ಸ್ಪಾಟ್ ಫೈನ್​ ಹಾಕಬಾರದು ಎಂದು ತಿಳಿಸಿದ್ದೇನೆ. ಈ ಕುರಿತು‌ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details