ಶಿವಮೊಗ್ಗ: ಪ್ರೀತಿಸು ಎಂದು ಪೀಡಿಸುತ್ತಿದ್ದ ಯುವಕನ ಕಿರುಕುಳದಿಂದ ಮಾನಸಿಕವಾಗಿ ತೀವ್ರ ವೇದನೆ ಅನುಭವಿಸಿದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊಸನಗರದ ಕರಿಮನೆ ಗ್ರಾಮದಲ್ಲಿ ನಡೆದಿದೆ.
ಪ್ರೀತಿಸುವಂತೆ ಪ್ರಾಣತಿನ್ನುತ್ತಿದ್ದ ಯುವಕ: ಹೊಸನಗರದಲ್ಲಿ ಬಾಲಕಿ ಆತ್ಮಹತ್ಯೆ - ಬಾಲಕಿ ಆತ್ಮಹತ್ಯೆ ಪ್ರಕರಣ
ಯುವಕನ ಕಿರುಕುಳದಿಂದ ಬೇಸತ್ತ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಹೊಸನಗರದ ಕರಿಮನೆ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ
ಕರಿಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಲಕಿ ಹೊಸನಗರದ ಹೋಲಿ ರೆಡಿಮೆಡ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಈಕೆಗೆ ಕೆಳಗಿನ ಕನ್ನಳ್ಳಿ ಗ್ರಾಮದ ಯುವಕ ಮೊಬೈಲ್ಗೆ ಕರೆ ಮಾಡಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನಂತೆ. ಇದರಿಂದ ಬೇಸತ್ತು ತಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಾಲಕಿಯ ಪೋಷಕರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಸಂಬಂಧ ಶಂಕೆ: ಮಾತುಕತೆಗೆ ಕರೆದು ಚಾಕುವಿನಿಂದ ಇರಿದ ವ್ಯಕ್ತಿ