ಶಿವಮೊಗ್ಗ:ವಿದ್ಯಾಗಮ ಪ್ರಾರಂಭವಾಗುತ್ತಿದ್ದಂತೆಯೇ ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನ ತಲಾ ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಇದನ್ನೂ ಓದಿ...ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರ ವಿತರಣೆ: ಸಚಿವ ಈಶ್ವರಪ್ಪ

ಶಿವಮೊಗ್ಗದ ಅನುಪಿನ ಕಟ್ಟೆ ಶಾಲೆ ಮತ್ತು ಶರಾವತಿ ನಗರದ ಬಿಜಿಎಸ್ ಹೈಸ್ಕೂಲ್ನ ಶಿಕ್ಷಕರಿಗೆ ಕೊರೊನಾ ಕಾಣಿಸಿಕೊಂಡಿದೆ. ಭದ್ರಾವತಿಯ ಹೊಸೂರು ತಾಂಡದ ಹೈಸ್ಕೂಲ್ನ ಶಿಕ್ಷಕಿ ಹಾಗೂ ನ್ಯೂ ಟೌನ್ ಸರ್ಕಾರಿ ಬಾಲಕಿಯರ ಹೈಸ್ಕೂಲ್ ಶಿಕ್ಷಕಿಗೆ ಮಹಾಮಾರಿ ವಕ್ಕರಿಸಿದೆ.
ಡಿಸೆಂಬರ್ 31ರಂದು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅವರ ವರದಿ ಜನವರಿ 3ರಂದು ಬಂದಿದೆ. ಈ ನಾಲ್ವರು ಸಹ ಜ. 1ರಿಂದ 3ರವರೆಗೂ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಡಿಪಿಐ ರಮೇಶ್, ಶಿಕ್ಷಕರು ಕೊರೊನಾ ವರದಿ ಬಂದ ನಂತರವೇ ಶಾಲೆಗೆ ಆಗಮಿಸಬೇಕಾಗಿರುವುದು ಕಡ್ಡಾಯ. ಆದರೆ ಯಾರೂ ವರದಿ ಬರುವುದಕ್ಕೂ ಮುನ್ನವೇ ಶಾಲೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.