ಶಿವಮೊಗ್ಗ: ಜಿಲ್ಲೆಯ ರಾಜೀವ್ ಗಾಂಧಿ ನಿರಾಶ್ರಿತ ಪ್ರದೇಶಕ್ಕೆ ಇಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ, ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಿದ್ರು.
ನಿರಾಶ್ರಿತ ಪ್ರದೇಶಗಳಿಗೆ ಮಾಜಿ ಡಿಸಿಎಂ ಭೇಟಿ: ಪರಿಹಾರದ ಭರವಸೆ - Flood effected areas
ಶಿವಮೊಗ್ಗ ಜಿಲ್ಲೆಯ ರಾಜೀವ್ ಗಾಂಧಿ ನಿರಾಶ್ರಿತರ ಪ್ರದೇಶಕ್ಕೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದ್ರು.
ಮಾಜಿ ಡಿಸಿಎಂ ಈಶ್ವರಪ್ಪ
ಕೆಲವು ದಿನಗಳ ಹಿಂದೆ ರಾಜಕಾರಣಿಗಳು ವೋಟ್ ಕೇಳೋಕೆ ಮಾತ್ರ ಬರ್ತಾರೆ, ನಮಗೆ ಸಮಸ್ಯೆ ಆದಾಗ ಯಾರೂ ಬರಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು. ಈ ಸುದ್ದಿಯನ್ನು ಈಟಿವಿ ಭಾರತ ಪ್ರಕಟ ಮಾಡಿತ್ತು, ಈ ಸುದ್ದಿಯಿಂದ ಎಚ್ಚೆತ್ತ ಶಾಸಕರು ಇಂದು ಬೆಳಗ್ಗೆ ರಾಜೀವ್ ಗಾಂಧಿ ನಿರಾಶ್ರಿತ ಪ್ರದೇಶಕ್ಕೆ ಭೇಟಿ ನೀಡಿ, ಸಮಸ್ಯೆ ಆಲಿಸಿದ್ರು.
ಹಾನಿಯಾದ ಮನೆಗಳನ್ನ ನಿರ್ಮಿಸಲು ಪರಿಹಾರ ನೀಡಲಾಗುವುದು. ಯಾರು ಭಯ ಪಡಬೇಕಾದ ಅಗತ್ಯವಿಲ್ಲ, ನಿಮ್ಮೊಂದಿಗೆ ಸರ್ಕಾರ ಇದೆ ಎಂದು ನಿರಾಶ್ರಿತರಿಗೆ ಶಾಸಕ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.