ಕರ್ನಾಟಕ

karnataka

ETV Bharat / state

ಕಾರಿನಲ್ಲಿ ಕುಳಿತು ರೋಚಕವಾಗಿದ್ದ ಆರ್​ಸಿಬಿ ಮ್ಯಾಚ್ ವೀಕ್ಷಿಸಿದ ಯಡಿಯೂರಪ್ಪ - BS Yadiyurappa news

ಸಾಕಷ್ಟು ರಾಜಕೀಯ ಒತ್ತಡದ ನಡುವೆಯೂ ಆರ್​ಸಿಬಿ ಪಂದ್ಯವನ್ನು ವೀಕ್ಷಿಸಿದ ಯಡಿಯೂರಪ್ಪ ಅವರ ಕ್ರಿಕೆಟ್ ಪ್ರೇಮವನ್ನು ನೋಡಿ ​ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Yadiyurappa watched RCB match
ಬಿಎಸ್ ಯಡಿಯೂರಪ್ಪ ಐಪಿಎಲ್ ವೀಕ್ಷಣೆ

By

Published : Oct 9, 2021, 1:11 PM IST

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ‌ ಎಸ್ ಯಡಿಯೂರಪ್ಪ ಅವರು ತಮ್ಮ ರಾಜಕೀಯ ಒತ್ತಡದ ನಡುವೆಯೂ ರೋಚಕವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯವನ್ನು ತಮ್ಮ ಕಾರಿನಲ್ಲಿ ಕುಳಿತು ವೀಕ್ಷಣೆ ಮಾಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದು, ಯಡಿಯೂರಪ್ಪ ಅವರ ಐಪಿಎಲ್​ ಕ್ರೇಜ್​ ಅಚ್ಚರಿ ಮೂಡಿಸುತ್ತಿದೆ.

ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ದತ್ತಿ ಪ್ರಶಸ್ತಿ ಕಾರ್ಯಕ್ರಮ ಮುಗಿಸಿ ಶಿಕಾರಿಪುರಕ್ಕೆ ತೆರಳುವ ವೇಳೆ ಮಾಜಿ ಮುಖ್ಯಮಂತ್ರಿ ಅವರು ಐಪಿಎಲ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಶ್ರಾಂತಿಗೆ ಮೊರೆ ಹೋಗದೇ ಪಕ್ಷದ ಸಂಘಟನೆಗಾಗಿ ಬಿಎಸ್​ವೈ ಜಿಲ್ಲಾ ಪ್ರವಾಸಗಳನ್ನು ಮಾಡುತ್ತಿದ್ದಾರೆ.

ಸಾಕಷ್ಟು ರಾಜಕೀಯ ಒತ್ತಡದ ನಡುವೆಯೂ ಆರ್​ಸಿಬಿ ಪಂದ್ಯವನ್ನು ವೀಕ್ಷಿಸಿದ ಯಡಿಯೂರಪ್ಪ ಅವರ ಕ್ರಿಕೆಟ್ ಪ್ರೇಮವನ್ನು ನೋಡಿ ಕ್ರಿಕೆಟ್​ ಅಭಿಮಾನಿಗಳು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಡೆಲ್ಲಿ ನೀಡಿದ್ದ 165 ರನ್​ಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಎಸೆತದಲ್ಲಿ ತಲುಪಿ ರೋಚಕ ಜಯ ಸಾಧಿಸಿತು. ಶ್ರೀಕಾರ ಭರತ್​ ಕೊನೆಯ ಎಸೆತದಲ್ಲಿ ಅಗತ್ಯವಿದ್ದ 5 ರನ್​ಗಳನ್ನು ಸಿಕ್ಸರ್​ ಮೂಲಕ ತಂದುಕೊಟ್ಟಿದ್ದು, ಆರ್​ಸಿಬಿ ಅಭಿಮಾನಿಗಳನ್ನು ಸಂಭ್ರಮದಲ್ಲಿ ತೇಲಾಡುವಂತೆ ಮಾಡಿದೆ.

ABOUT THE AUTHOR

...view details