ಶಿವಮೊಗ್ಗ: ತನ್ನಲ್ಲದ ತಪ್ಪಿಗೆ ಅಮಾನತು ಮಾಡಿದ್ದಾರೆ ಎಂದು ಉಂಬ್ಳೆಬೈಲು ವಲಯದ ಉಪ ವಲಯ ಅರಣ್ಯಾಧಿಕಾರಿ ಶಿವಮೊಗ್ಗ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ಉಂಬ್ಳೆಬೈಲು ವಲಯದ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ರನ್ನು ನಿನ್ನೆ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅಮಾನತು ಮಾಡಿದ್ದಾರೆ. ಇದನ್ನು ಖಂಡಿಸಿ ಮಂಜುನಾಥ್ ಇಂದು ಸಿಸಿಎಫ್ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.
ಅಮಾನತು, ಘಟನೆ ಹಿನ್ನೆಲೆ:
ನಿನ್ನೆ ವ್ಯಕ್ತಿಯೋರ್ವ ಮರದ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗುವಾಗ ಮಂಜುನಾಥ್ ಹಿಡಿದಿದ್ದಾರೆ. ಪೀಠೋಪಕರಣದ ಪರವಾನಗಿ ಕೇಳಿದ್ದಾರೆ. ಇದಕ್ಕೆ ಆ ವ್ಯಕ್ತಿ ತನ್ನ ಬಳಿ ಪರವಾನಗಿಯ ಜೆರಾಕ್ಸ್ ಮಾತ್ರ ಇದೆ ಎಂದು ಹೇಳಿ ತೋರಿಸಿ, ಬೆಳಗ್ಗೆ ಮೂಲ ಪ್ರತಿ ತೋರಿಸುವುದಾಗಿ ಹೇಳಿ, ನಂತರ ಸಿಸಿಎಫ್ ಬಳಿ ಬಂದು ತಮ್ಮ ವಿರುದ್ಧ ಲಂಚದ ಆರೋಪ ಮಾಡಿ ದೂರು ನೀಡಿದ್ದಾರೆ.
ಇದರಿಂದ ಸಿಸಿಎಫ್ ನನ್ನನ್ನು ವಿನಾ ಕರಣ ಅಮಾನತು ಮಾಡಿದ್ದಾರೆ ಎಂದು ಆರೋಪಿಸಿ ಧರಣಿ ನಡೆಸಿದ್ದಾರೆ. ಆದರೆ ಸಿಸಿಎಫ್ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.