ಕರ್ನಾಟಕ

karnataka

ETV Bharat / state

ಮಲೆನಾಡಿನಲ್ಲಿ ಧಾರಾಕಾರ ಮಳೆ.. ಡ್ಯಾಂ ಕೋಡಿಯಿಂದ ಹೊರ ಬರುತ್ತಿರುವ ಮೀನುಗಳಿಗೆ ಗಾಳ ಹಾಕಲು ಪೈಪೋಟಿ..

ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಒಂದೆಡೆ ರೈತರು ಹರ್ಷ ವ್ಯಕ್ತಪಡಿಸಿದರೆ. ಇನ್ನೊಂದೆಡೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಶಿವಮೊಗ್ಗದಲ್ಲಿ ಮೀನು ಹಿಡಿಯಲು ತಾ ಮುಂದು ನಾ ಮುಂದು ಎಂಬಂತೆ ಜನರು ಡ್ಯಾಂ ಮುಂದೆ ಸಾಲುಗಟ್ಟಿ ನಿಂತಿದ್ದಾರೆ..

ಡ್ಯಾಂ ಕೋಡಿಯಿಂದ ಹೊರಬರುತ್ತಿರುವ ಮೀನಿನ ಬೇಟೆಯಲ್ಲಿ ಜನ ಸಾಮಾನ್ಯರು !
ಡ್ಯಾಂ ಕೋಡಿಯಿಂದ ಹೊರಬರುತ್ತಿರುವ ಮೀನಿನ ಬೇಟೆಯಲ್ಲಿ ಜನ ಸಾಮಾನ್ಯರು !

By

Published : Jul 23, 2021, 4:07 PM IST

ಶಿವಮೊಗ್ಗ: ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಜಿಲ್ಲೆಯ ಕೆರೆ,ಕಟ್ಟೆಗಳು ತುಂಬಿ ಹರಿಯುತ್ತಿವೆ. ಇನ್ನು, ಶಿಕಾರಿಪುರ ತಾಲೂಕು ಅಂಬ್ಲಿಗೋಳ ಹೊಸೂರ ಡ್ಯಾಂ ಭರ್ತಿಯಾಗಿದ್ದು, ಡ್ಯಾಂ ಕೋಡಿಯಿಂದ ಹೊರ ಬರುತ್ತಿರುವ ನೀರಿನಲ್ಲಿ ಮೀನು ಬೇಟೆ ಭರ್ಜರಿಯಾಗಿದೆ.

ಡ್ಯಾಂ ಕೋಡಿಯಿಂದ ಹೊರ ಬರುತ್ತಿರುವ ಮೀನಿನ ಬೇಟೆಯಲ್ಲಿ ಜನ ಸಾಮಾನ್ಯರು..

ಹೆಚ್ಚಿನ ಓದಿಗೆ : ಉಕ್ಕಿ ಹರಿಯುತ್ತಿರುವ ಚಿಕ್ಕೊತ್ರಾ ನದಿ : ಜಾನುವಾರು ಸಮೇತ ಗ್ರಾಮಗಳನ್ನು ಖಾಲಿ ಮಾಡುತ್ತಿರುವ ಜನರು

ನೀರಿನೊಂದಿಗೆ ಹೊರ ಬರುತ್ತಿರುವ ಡ್ಯಾಂನಲ್ಲಿರುವ ಮೀನುಗಳನ್ನು ಹಿಡಿಯಲು ಬಲೆ ‌ಹಿಡಿದು ಜನ ಸಾಲುಗಟ್ಟಿ ನಿಂತಿದ್ದಾರೆ. ಭಾರೀ ಮಳೆಯಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಬೇಟೆ ಮಾಡಿಯೇ ಹೋಗುತ್ತೇವೆ ಎನ್ನುವಂತೆ ಎಲ್ಲರು ತುಂಬಾ ಉತ್ಸಾಹದಿಂದ ಮೀನು ಹಿಡಿಯುವುದರಲ್ಲಿ ನಿರತರಾಗಿದ್ದಾರೆ.

ABOUT THE AUTHOR

...view details