ಕರ್ನಾಟಕ

karnataka

ETV Bharat / state

ತಾಳಗುಪ್ಪದ ರಂಗಪ್ಪನ ಗುಡ್ಡದಲ್ಲಿ ಭಾರಿ ಶಬ್ದದೊಂದಿಗೆ ಬೆಂಕಿ: ಅಕೇಶಿಯಾ ಪ್ಲಾಂಟ್ ನಾಶ - ತಾಳಗುಪ್ಪದ ರಂಗಪ್ಪನ ಗುಡ್ಡದಲ್ಲಿ ಬೆಂಕಿ

ಸಾಗರ ತಾಲೂಕಿನ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಂಗಪ್ಪನ ಗುಡ್ಡದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಪರಿಣಾಮ ಪಕ್ಕದಲ್ಲೇ ಇದ್ದ ಅಕೇಶಿಯಾ ಪ್ಲಾಂಟ್​​ನಲ್ಲಿ ಬೆಂಕಿ ಕಾಣಿಸಿಕೊಂಡು ನಷ್ಟ ಸಂಭವಿಸಿದೆ.

Fire with heavy noise in Rangappa hill
ತಾಳಗುಪ್ಪದ ರಂಗಪ್ಪನ ಗುಡ್ಡದಲ್ಲಿ ಬೆಂಕಿ

By

Published : Oct 25, 2021, 3:57 PM IST

ಶಿವಮೊಗ್ಗ:ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಂಗಪ್ಪನ ಗುಡ್ಡದಲ್ಲಿ ಭಾರಿ ಸ್ಫೋಟದೊಂದಿಗೆ ಬೆಂಕಿ ಕಾಣಿಸಿಕೊಂಡಿದೆ.

ತಾಳಗುಪ್ಪದ ರಂಗಪ್ಪನ ಗುಡ್ಡದಲ್ಲಿ ಭಾರಿ ಶಬ್ದದೊಂದಿಗೆ ಬೆಂಕಿ

ಇಲ್ಲಿನ ರಂಗಪ್ಪನ ಗುಡ್ಡದ ಬಳಿ ಬೆಂಗಳೂರು ಹಾಗೂ ಇನ್ನಿತರ ನಗರ ಪ್ರದೇಶಗಳಿಗೆ ವಿದ್ಯುತ್ ನೀಡುವ ಕೆಪಿಸಿಯ ಹೈಟೆನ್ಷನ್​​ ವೈರ್ ಹಾದುಹೋಗಿದೆ. ಈ ಲೈನ್ ಬಳಿಯೇ ಅಕೇಶಿಯಾ ಪ್ಲಾಂಟ್ ಇದೆ.

ಇದರ ಸಮರ್ಪಕ ನಿರ್ವಹಣೆ ಕೊರತೆಯಿಂದ ಇದೀಗ ಭಾರಿ ಪ್ರಮಾಣದ ಶಬ್ದದೊಂದಿಗೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುತ್ತಮುತ್ತಲಿನ ನಿವಾಸಿಗಳು ಪ್ರಾಣ ಭಯದಿಂದ ಮನೆ ಬಿಟ್ಟು ಹೊರಗಡೆ ಬಂದು ನಿಂತಿದ್ದರು. ಬೆಂಕಿನಿಂದ ಅಕೇಶಿಯಾ ಪ್ಲಾಂಟ್​​​ನಲ್ಲಿ ಅಪಾರ ಪ್ರಮಾಣದ ನಷ್ಟವಾಗಿದೆ.

ಕೆಪಿಸಿಯ ನಿರ್ಲಕ್ಷ್ಯದಿಂದ ಇಂತಹ ವಿದ್ಯುತ್ ಅವಘಡಗಳು ಆಗಾಗ ನಡೆಯುತ್ತಿದ್ದು, ಇದರಿಂದ ಸರ್ಕಾರ ಮತ್ತು ಸ್ಥಳೀಯ ನಿವಾಸಿಗಳಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕೂಡಲೇ ಸರ್ಕಾರ ಇತ್ತ ಗಮನಹರಿಸಿ ಕೆಪಿಸಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಒದಿ:ತಮ್ಮನಿಗೆ ಹೆಣ್ಣು ಗೊತ್ತು ಮಾಡಲು ಹೊರಟಿದ್ದ ವೇಳೆ ಅಪಘಾತ... ಪತ್ನಿ, ಮಗು ಮೇಲೆ ಹರಿದ ಲಾರಿ

ABOUT THE AUTHOR

...view details