ಕರ್ನಾಟಕ

karnataka

ETV Bharat / state

ಎಫ್​ಡಿಎ-ಎಸ್​ಡಿಎ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ತಡೆ ಆದೇಶ ತೆರವಿಗೆ ಮನವಿ - Shivamogga

2017-18ರ ಅಧಿಸೂಚನೆಯ ಅಡಿಯಲ್ಲಿ ಆಯ್ಕೆಯಾದ ಎಫ್​ಡಿಎ ಹಾಗೂ ಎಸ್​ಡಿಎ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದಿರುವ ಆದೇಶವನ್ನು ತೆರವುಗೊಳಿಸಿ ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕೆಂದು ಆಯ್ಕೆಯಾಗಿರುವ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ..

Appeal
ಮನವಿ

By

Published : Sep 22, 2020, 8:20 PM IST

ಶಿವಮೊಗ್ಗ :ಕೆಪಿಎಸ್‌ಸಿ 2017-18ರ ಅಧಿಸೂಚನೆ ಅಡಿ ಆಯ್ಕೆಯಾದ ಎಫ್​ಡಿಎ ಹಾಗೂ ಎಸ್​ಡಿಎ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ತಡೆಹಿಡಿದಿರುವ ಆದೇಶ ತೆರವುಗೊಳಿಸಿ ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ 2017-18ರ ಅಧಿಸೂಚನೆಯ ಅಡಿ ಆಯ್ಕೆಯಾದ ಎಫ್​ಡಿಎ ಹಾಗೂ ಎಸ್​ಡಿಎ ನೊಂದ ಅಭ್ಯರ್ಥಿಗಳಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನೊಂದ ಅಭ್ಯರ್ಥಿಗಳು

ಕೆಪಿಎಸ್‌ಸಿ ವತಿಯಿಂದ 2017-18ರ ಅವಧಿಯಲ್ಲಿ ಎಸ್​ಡಿಎ ಹಾಗೂ ಎಫ್​ಡಿಎ ನೇಮಕಾತಿಯ 1,812 ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಜುಲೈ 2020 ಅಂತಿಮ ಆಯ್ಕೆ ಪಟ್ಟಿ ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆ ಹಂಚಿಕೆ ಮಾಡಿ ಇಲಾಖೆಗಳಿಗೆ ನೇಮಕಾತಿ ಹಾಗೂ ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆಗೊಳಿಸಿ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳುವಂತೆ ಸರ್ಕಾರ ಆದೇಶಿಸಿತ್ತು.

ಆದರೆ, ಕೊರೊನಾ ಹಿನ್ನೆಲೆ ಹಣಕಾಸು ಇಲಾಖೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಹಣಕಾಸಿನ ಸಂಕಷ್ಟ ಸರಿದೂಗಿಸುವ ಸಲುವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ ಆರ್ಥಿಕ ವರ್ಷದವರೆಗೆ ಸ್ಥಗಿತಗೊಳಿಸುವಂತೆ ಹಾಗೂ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡದಂತೆ ಇಲಾಖೆಗಳಿಗೆ ಸರ್ಕಾರದಿಂದ ಆದೇಶ ನೀಡಲಾಗಿದೆ. ಆದರೆ, ಕೆಲ ಇಲಾಖೆಗಳು ಸರ್ಕಾರವು ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವ ಆದೇಶ ಹೊರಡಿಸಿದ ನಂತರವೂ ಕೂಡ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಅಭ್ಯರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿವೆ.

ಹಾಗಾಗಿ, 2017-18ರ ಎಫ್​ಡಿಎ ಹಾಗೂ ಎಸ್​ಡಿಎ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಗೆ ಹೊರಡಿಸಿರುವ ತಡೆಯಾಜ್ಞೆ ಹಿಂಪಡೆದು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಕರ್ತವ್ಯಕ್ಕೆ ಹಾಜರು ಪಡಿಸಿಕೊಳ್ಳುವಂತೆ ಆಯಾ ಇಲಾಖೆಗಳಿಗೆ ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ABOUT THE AUTHOR

...view details