ಶಿವಮೊಗ್ಗ:ಖಾಸಗಿ ಹಾಲು ಮಾರಾಟ ಕಂಪನಿ ಹಾಟ್ಸನ್ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಲಿನ ಡೈರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ.
ಹಾಟ್ಸನ್‌ನಿಂದ ಹಾಲು ಉತ್ಪಾದಕರಿಗೆ ವಂಚನೆ ಆರೋಪ: ರೈತ ಸಂಘ ಪ್ರತಿಭಟನೆ - Hatsan milk dairy cheeting news
ಶಿಕಾರಿಪುರ ತಾಲೂಕು ಬೆಲವಂತನ ಕೊಪ್ಪ ಗ್ರಾಮದಲ್ಲಿ ಹಾಟ್ಸನ್ ಕಂಪನಿಯು ರೈತರಿಂದ ಹಾಲು ಪಡೆದು ಹಣ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಬೆಲವಂತನ ಕೊಪ್ಪ ಗ್ರಾಮದಲ್ಲಿ ಹಾಟ್ಸನ್ ಕಂಪನಿಯು ಈ ಭಾಗದ ರೈತರಿಂದ ಹಾಲು ಪಡೆದು ಹಣ ನೀಡದೆ ಮೋಸ ಮಾಡುತ್ತಿದೆ. ಕಳೆದ ಐದು ವರ್ಷಗಳಿಂದ ಈ ಕಂಪನಿಯು ಈ ಭಾಗದ ರೈತರಿಗೆ ಹೆಚ್ಚಿನ ದರ ನೀಡುವುದಾಗಿ ನಂಬಿಸಿ, ಹಾಲು ಹಾಕಿಸಿಕೊಳ್ತಿತ್ತು. ಕಳೆದ ಒಂದೂವರೆ ತಿಂಗಳಿನಿಂದ ರೈತರು ನೀಡುವ ಹಾಲಿನಲ್ಲಿ ಎಂಎಸ್ಪಿ ಕಡಿಮೆ ಇದೆ ಎಂದು ಹೇಳಿ ಲೀಟರ್ ಹಾಲಿಗೆ ಕೇವಲ 4 ರೂ ನೀಡುತ್ತಿದ್ದು ಎಂದು ರೈತರು ಆರೋಪಿಸಿದ್ದಾರೆ.
ಈ ವಿಚಾರವನ್ನು ಹಾಟ್ಸನ್ ಕಂಪನಿಯ ಅಧಿಕಾರಿಗಳು ಮೇಲಧಿಕಾರಿಗಳಿಗೆ ತಿಳಿಸಿ, ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ ಮೇರೆಗೆ ರೈತ ಸಂಘ ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್ ಪಡೆದಿದೆ.