ಕರ್ನಾಟಕ

karnataka

By

Published : Jul 7, 2022, 3:10 PM IST

Updated : Jul 7, 2022, 3:31 PM IST

ETV Bharat / state

ಹಿಂದೂಗಳ ಮೇಲೆ ದಾಳಿ‌ ನಡೆಸಿದರೆ, ಅದು ಅವರಿಗೇ ತಿರುಗುಬಾಣವಾಗಲಿದೆ: ಕೆ.ಎಸ್.ಈಶ್ವರಪ್ಪ

ಹಿಂದೂ ಯುವಕರ ಮೇಲೆ ದಾಳಿ ನಡೆಸಿದರೆ ಹಿಂದೂ ಸಮಾಜ ಮಾತ್ರವಲ್ಲ, ಸರ್ಕಾರ ಕೂಡ ಅಂತವರನ್ನು ಹಿಡಿದು ಕಠಿಣ ಶಿಕ್ಷೆ ನೀಡಬೇಕೆಂದು ಈಶ್ವರಪ್ಪ ಒತ್ತಾಯಿಸಿದರು.

ex-minister-ks-eshwarappa-recation-on-kerur-incident
ಹಿಂದೂಗಳ ಮೇಲೆ ದಾಳಿ‌ ನಡೆಸಿದ್ರೆ, ಅದು ಅವರಿಗೇ ತಿರುಗುಬಾಣವಾಗಲಿದೆ:ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ:ಇತ್ತೀಚೆಗೆ ದುಷ್ಟಶಕ್ತಿಗಳು, ಭಯೋತ್ಪಾದಕರು ಹಿಂದೂ ಯುವಕರನ್ನು ಕಗ್ಗೂಲೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂಗಳ ಮೇಲೆ ದಾಳಿ ನಡೆಸುವವರಿಗೆ ಇಂದಲ್ಲಾ, ನಾಳೆ ಅದು ಅವರಿಗೇ ತಿರುಗುಬಾಣವಾಗಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಾಗಲಕೋಟೆಯ ಕೆರೂರು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಕೊಲೆ ಮಾಡುವ ಕೆಲಸಕ್ಕಿಂತ ಇನ್ನೂಂದು‌ ನೀಚ ಕೆಲಸವಿಲ್ಲ. ಅಂಗಡಿಗೆ ಬೆಂಕಿ ಹಾಕುವುದು, ಚಾಕು ತೋರಿಸಿ ಬೆದರಿಸುವುದು ಇಂದಲ್ಲಾ, ನಾಳೆ ಅದು ಅವರಿಗೆ ತಿರುಗುಬಾಣವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಈಗ ವಿಶ್ವದಲ್ಲಿಯೇ ಹಿಂದುತ್ವದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಹಿಂದುತ್ವ ಎಂದರೆ ಒಡೆಯುವುದಲ್ಲ. ಒಗ್ಗೂಡಿಸುವುದು.‌ ಹಿಂದೂ ಯುವಕರ ಮೇಲೆ ದಾಳಿ ನಡೆಸಿದರೆ ಹಿಂದೂ ಸಮಾಜ ಮಾತ್ರವಲ್ಲ, ಸರ್ಕಾರ ಕೂಡ ಅಂತವರನ್ನು ಹಿಡಿದು ಕಠಿಣ ಶಿಕ್ಷೆ ನೀಡಬೇಕು. ಅಲ್ಲದೇ, ಮುಸ್ಲಿಂ ಸಮಾಜದ ಹಿರಿಯರು ಅವರಿಗೆ ಬುದ್ಧಿ ಹೇಳಬೇಕು ಎಂದರು.

ಹಿಂದೂಗಳ ಮೇಲೆ ದಾಳಿ‌ ನಡೆಸಿದರೆ, ಅದು ಅವರಿಗೇ ತಿರುಗುಬಾಣವಾಗಲಿದೆ: ಕೆ.ಎಸ್.ಈಶ್ವರಪ್ಪ

ಇದೇ ವೇಳೆ ಹರ್ಷನ ಕೊಲೆ ಪ್ರಕರಣ ಆರೋಪಿಗಳು ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ ಈಶ್ವರಪ್ಪ, ಮನುಷ್ಯರಲ್ಲಿ ಸ್ವಾರ್ಥತೆ ಇದ್ದೆ ಇರುತ್ತದೆ. ಪರಪ್ಪನ ಆಗ್ರಹಾರ ಆಗಿರಬಹುದು ಅಥವಾ ತಿಹಾರ್​ ಜೈಲ್​ ಆಗಿರಬಹುದು, ಕೆಲವು ಸ್ವಾರ್ಥ ವ್ಯಕ್ತಿಗಳು ನಡೆಸುವ ಕುತಂತ್ರ ತಕ್ಷಣ ತಿಳಿಯಲು ಆಗದು.

ಇಂತಹದ್ದು ಗೊತ್ತಾದ ತಕ್ಷಣ ಸರ್ಕಾರ ತನ್ನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ದುಷ್ಟ ಶಕ್ತಿಗಳು ಒಳಗೂ, ಹೊರಗೂ ಇದ್ದೆ ಇರುತ್ತಾರೆ. ಹರ್ಷನ ಕೊಲೆ ಮಾಡಿದವರು ಅಲ್ಲಿನ ಸಿಬ್ಬಂದಿಗೆ ಲಂಚ ಕೊಟ್ಟು ತಮ್ಮ ಕೆಲಸ ಮಾಡಿಕೊಳ್ಳುವಂತಹ ಪ್ರಯತ್ನ ನಡೆಸುತ್ತಾರೆ ಎಂದು ಆರೋಪಿಸಿದರು.

ಅಭಿನಂದನೆ ಸಲ್ಲಿಕೆ:ಕ್ರೀಡಾ ಕ್ಷೇತ್ರದಲ್ಲಿ ಪಿ.ಟಿ.ಉಷಾ, ಧಾರ್ಮಿಕ ಕ್ಷೇತ್ರದಲ್ಲಿ ವೀರೇಂದ್ರ ಹೆಗಡೆ ಹಾಗೂ ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿ ಇಳಿಯರಾಜ ಹಾಗೂ ವೀರೇಂದ್ರ ಪ್ರಸಾದ್ ಸಾಧನೆ ಅಪಾರವಾಗಿದೆ. ಹೀಗಾಗಿ ರಾಜ್ಯಸಭೆಗೆ ನಾಮನಿರ್ದೇಶನವಾದ ಈ ನಾಲ್ವರು ಗಣ್ಯರು ಹಾಗೂ ಅವರನ್ನು ಆಯ್ಕೆ ಮಾಡಿದ ಪ್ರಧಾನಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ನೇಮಕ ದೇಶವೇ ಸಂತೋಷ ಪಡುವ ವಿಚಾರವಾಗಿದೆ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ:ಕೆರೂರಲ್ಲಿ ಗುಂಪು ಘರ್ಷಣೆ: ಹಳೇ ದ್ವೇಷ, ಯುವತಿಯರನ್ನು ಚುಡಾಯಿಸಿದ್ದೇ ಗಲಾಟೆಗೆ ಕಾರಣ

Last Updated : Jul 7, 2022, 3:31 PM IST

ABOUT THE AUTHOR

...view details