ಶಿವಮೊಗ್ಗ: ವೃದ್ಧೆಯೊಬ್ಬರು ತಾವು ಕೊಡಿಟ್ಟ ಹಣವನ್ನು ಪಿಎಂ ಕೇರ್ಸ್ ಫಂಡ್ ಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕೂಡಿಟ್ಟ ಹಣ ಪಿಎಂ ಫಂಡ್ಗೆ ನೀಡಿ ಮಾದರಿಯಾದ ವೃದ್ಧೆ
ಶಿವಮೊಗ್ಗದಲ್ಲಿ ವೃದ್ಧೆ ತಾವು ಕೂಡಿಟ್ಟಿದ್ದ ಹಣವನ್ನು ಕೊರೊನಾ ರಿಲೀಫ್ ಫಂಡ್ಗೆ ನೀಡಿ ಗಮನ ಸೆಳೆದಿದ್ದಾರೆ
ಕೂಡಿಟ್ಟ ಹಣವನ್ನು ಪಿಎಂ ಫಂಡ್ಗೆ ನೀಡಿ ಮಾದರಿಯಾದ ವೃದ್ಧೆ
ಜಿಲ್ಲೆಯ ಸಾಗರ ತಾಲೂಕು ಖಂಡಿಕಾ ಗ್ರಾಮದ ಪದ್ಮಾವತಮ್ಮ ಎಂಬ 65 ವರ್ಷದ ವೃದ್ಧೆಯೊಬ್ಬರು ತಾನು ಕೂಡಿಟ್ಟ 2,800 ರೂ. ಹಣವನ್ನು ಪಿಎಂ ಕೊರೊನಾ ಫಂಡ್ಗೆ ಹೇಗೆ ಹಣ ಕಳುಹಿಸಬೇಕು ಎಂದು ಗ್ರಾಮದ ಪೋಸ್ಟ್ ಆಫೀಸ್ ನಲ್ಲಿ ವಿಚಾರಿಸಿದಾಗ ಪೋಸ್ಟ್ ಆಫೀಸ್ ನ ಮಂಜಪ್ಪನವರು ಸಹಾಯಕ್ಕೆ ಬಂದಿದ್ದಾರೆ.
ತಕ್ಷಣ ಪದ್ಮಾವತಮ್ಮ ಮಂಜಪ್ಪನವರಿಗೆ ತಮ್ಮ ಬಳಿ ಇದ್ದ 2,800 ರೂ. ಹಣವನ್ನು ನೀಡಿದ್ದಾರೆ. ಮಂಜಪ್ಪನವರು ಆ ದುಡ್ಡನ್ನು ಪಿಎಂ ಪರಿಹಾರ ನಿಧಿಗೆ ತಲುಪಿಸಿದ್ದಾರೆ.