ಕರ್ನಾಟಕ

karnataka

ETV Bharat / state

ಕುಂಸಿಯಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಮಧು ಬಂಗಾರಪ್ಪ ಚಾಲನೆ

ಕೇವಲ ಸದಸ್ಯತ್ವ ಮಾಡಿದರೆ ಸಾಲದು, ಪಕ್ಷವನ್ನು ಸಂಘಟಿಸುವ ಕಾರ್ಯವಾಗಬೇಕು. ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಹೋರಾಡುವ ಯುವಕರು ಪಕ್ಷಕ್ಕೆ ಅಗತ್ಯವಿದೆ.

Digital Membership Campaign of the Block Congress
ಕುಂಸಿಯಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಮಧುಬಂಗಾರಪ್ಪ

By

Published : Mar 26, 2022, 9:11 PM IST

ಶಿವಮೊಗ್ಗ: ಕಾಂಗ್ರೆಸ್ ಪಕ್ಷ ಸರ್ವರ ಪಕ್ಷ, ಈ ಪಕ್ಷ ಯಾವುದೇ ಜಾತಿ ಮತ್ತು ಧರ್ಮದ ನೆಲೆಯಲ್ಲಿ ಹುಟ್ಟಿಕೊಂಡಿದ್ದಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವನ್ನು ಸಾಮಾನ್ಯ ಜನರ ಪ್ರೀತಿ, ವಿಶ್ವಾಸದ ತಳಹದಿಯ ಮೇಲೆ ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.

ಶಿವಮೊಗ್ಗ ತಾಲೂಕು ಕುಂಸಿಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕುಂಸಿ ಬ್ಲಾಕ್‌ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರ ನಡುವೆ ಇದ್ದುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಸೌಲಭ್ಯಗಳಿಗಾಗಿ ಹೋರಾಟ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರು ಮುನ್ನಡೆಯ ಬೇಕು. ಬರೀ ಸದಸ್ಯತ್ವ ಹೆಚ್ಚು ಮಾಡಿದರೆ ಮಾತ್ರ ಸಾಲದು. ಜನಪರ ಹೋರಾಟಗಳ ಮೂಲಕ ಸರ್ವಜನರ ವಿಶ್ವಾಸ ಗಳಿಸಬೇಕು ಎಂದು ಮಧುಬಂಗಾರಪ್ಪ ಕರೆ ನೀಡಿದರು.

ಕುಂಸಿಯಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಮಧುಬಂಗಾರಪ್ಪ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್. ಸುಂದರೇಶ್, ಕೆಪಿಸಿಸಿ ವೀಕ್ಷಕರಾದ ಹುಸೇನ್, ಜಿಲ್ಲಾ ಪಂಚಾಯತ್​ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಡಾ. ಶ್ರೀನಿವಾಸ್ ಕರಿಯಣ್ಣ, ಪಲ್ಲವಿ, ವಿಜಯಕುಮಾರ್, ಶೆಟ್ಟಿಕೆರೆ ರಾಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಪ್ರಮುಖರಾದ ಜಿ.ಡಿ. ಮಂಜುನಾಥ್, ಕುಂಸಿ ಸಂಜೀವಣ್ಣ, ಕುಂಸಿ ರಾಮಣ್ಣ, ವೈ. ಎಚ್. ನಾಗರಾಜ್, ಚೋರಡಿ ಕಷ್ಣಮೂರ್ತಿ, ಡಿ.ಕೆ. ಮೋಹನ್, ಚೋರಡಿ ರಾಜೇಶ್, ಕುಂಸಿ ಮಂಜಣ್ಣ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ:ಮಾನವೀಯತೆಯೇ ಶ್ರೇಷ್ಠ ಕಾನೂನು, ನ್ಯಾಯ: ಸಚಿವ ಮಾಧುಸ್ವಾಮಿ

ABOUT THE AUTHOR

...view details