ಶಿವಮೊಗ್ಗ:ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈ ರನ್ನ್ನು ನಗರದಲ್ಲಿ ಪ್ರಾರಂಭ ಮಾಡಲಾಗಿದೆ. ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಡ್ರೈರನ್ ವ್ಯಾಕ್ಸಿನೇಷನ್ ಕೇಂದ್ರ ಮಾಡಲಾಗಿದ್ದು, ಮುಂದೆ ವ್ಯಾಕ್ಸಿನೇಷನ್ ಬಂದಾಗ ಯಾವ ರೀತಿ ನೀಡುವುದು. ಚುಚ್ಚುಮದ್ದಿನ ಕೇಂದ್ರ ಹೇಗೆ ಇರಬೇಕು ಸೇರಿದಂತೆ ಇತರ ವಿಷಯಗಳ ಕುರಿತು ಇಂದು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮೂರು ಕಡೆ ವ್ಯಾಕ್ಸಿನ್ ಡ್ರೈ ರನ್ ಕೇಂದ್ರ ತೆರೆಯಲಾಗಿದೆ. ನಗರ ಭಾಗಕ್ಕೆ ಸಿಮ್ಸ್ ಮೆಡಿಕಲ್ ಕಾಲೇಜು, ಪಟ್ಟಣ ಭಾಗಕ್ಕೆ ಶಿಕಾರಿಪುರ ತಾಲೂಕು ಆಸ್ಪತ್ರೆ ಹಾಗೂ ಗ್ರಾಮೀಣ ಭಾಗಕ್ಕೆ ಭದ್ರಾವತಿ ತಾಲೂಕಿನ ಅಂತರಗಂಗೆ ಪ್ರಾಥಮಿಕ ಆರೊಗ್ಯ ಕೇಂದ್ರ ಹೀಗೆ ಇಂದು ಮೂರು ಕಡೆ ಡ್ರೈ ರನ್ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 21 ಸಾವಿರ ಜನಕ್ಕೆ ಕೊರೊನಾ ಲಸಿಕೆ ನೀಡುವ ಪಟ್ಟಿ ತಯಾರು ಮಾಡಲಾಗಿದೆ. ಇದರಲ್ಲಿ ಆಯ್ದ 75 ಮಂದಿಗೆ ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಡ್ರೈ ರನ್ ಮಾಡಲಾಗುತ್ತಿದೆ. ಡ್ರೈ ರನ್ ಕೇಂದ್ರದಲ್ಲಿ ವೆಕ್ಟಿಂಗ್ ರೂಂ, ವ್ಯಾಕ್ಸಿನೇಷನ್ ರೂಂ ಹಾಗೂ ಅಬ್ಸರ್ವೇಷನ್ ರೂಂಗಳನ್ನು ಮಾಡಲಾಗಿದೆ.