ಶಿವಮೊಗ್ಗ: ಜನತೆ ಅನಗತ್ಯವಾಗಿ ತಿರುಗಾಡುತ್ತಾ ಕೊರೊನಾ ಜಾಸ್ತಿ ಮಾಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಮಾಸ್ಕ್ ಧರಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಜನರ ಬೇಜವಾಬ್ದಾರಿಯಿಂದ ಕೊರೊನಾ ಹೆಚ್ಚಾಗುತ್ತಿದೆ: ಸಚಿವ ಈಶ್ವರಪ್ಪ
ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಸರ್ವೆ ಕೇಂದ್ರದ ಹಸಿರು ಪೀಠದ ಒಪ್ಪಿಗೆ ಪಡೆದು ನಡೆಯುತ್ತಿದೆ. ಆದರೂ ಸಹ ಈ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಜನರ ಬೇಜವಾಬ್ದಾರಿಯಿಂದ ಕೊರೊನಾ ಹೆಚ್ಚಾಗುತ್ತಿದೆ:ಸಚಿವ ಈಶ್ವರಪ್ಪ
ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಕೊರೊನಾ ಹತೋಟಿಗೆ ಜಿಲ್ಲಾಡಳಿತ ಹೆಚ್ಚಿನ ಕ್ರಮ ವಹಿಸಿದೆ. ಆದರೂ ಜನ ಸುಮ್ಮನೇ ತಿರುಗಾಡುವುದನ್ನು ಬಿಡಬೇಕು ಎಂದರು.
ಜಿಲ್ಲೆಯ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಸರಿ ಇಲ್ಲ. ಅಲ್ಲದೆ ಶರಾವತಿ ಭೂಗರ್ಭ ಜಲ ವಿದ್ಯುತ್ ಯೋಜನೆಯು ಕಾರ್ಯ ಸಾಧುವಲ್ಲ. ಎಲ್ಲಿಯ ಶರಾವತಿ, ಎಲ್ಲಿಯ ಬೆಂಗಳೂರು. ಈ ಯೋಜನೆಯ ಬಗ್ಗೆ ಆರ್ಡಿಪಿಆರ್ ಮಾಡಿದ್ದು ಯಾರು ಎಂದು ಗೊತ್ತಿಲ್ಲ. ಸುಮ್ಮನೆ ಯೋಜನೆ ಮಾಡಿ ಬಿಟ್ಟರೆ ಆಗುತ್ತದೆಯೇ ಎಂದು ಬೇಸರ ವ್ಯಕ್ತಪಡಿಸಿದರು.