ಕರ್ನಾಟಕ

karnataka

ETV Bharat / state

ಕೊರೊನಾ ಹೊಡೆತಕ್ಕೆ ನಲುಗಿದ ಪುಸ್ತಕೋದ್ಯಮ

ಕೋವಿಡ್​ದಿಂದಾಗಿ ಹೊರ ಹೋಗಲು ಹಿಂಜರಿಯುತ್ತಿದ್ದ ಕಾರಣ ಪುಸ್ತಕ ಪ್ರೇಮಿಗಳು ಆನ್​​ಲೈನ್​ ಮೂಲಕ ಪುಸ್ತಕ ಖರೀದಿಸುತ್ತಿದ್ದರು. ಇದು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ತಲೆನೋವು ತರಿಸಿದೆ.

Corona effect on books business
ಕೊರೊನಾ ಹೊಡೆತಕ್ಕೆ ನಲುಗಿದ ಪುಸ್ತಕೋದ್ಯಮ

By

Published : Jan 7, 2021, 5:15 PM IST

ಶಿವಮೊಗ್ಗ:ಕೊರೊನಾ ಕಾರಣದಿಂದಾಗಿ ಪುಸ್ತಕ ವ್ಯಾಪಾರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವ್ಯಾಪಾರ- ವಹಿವಾಟು ಇಲ್ಲದೆ ಮಳಿಗೆ ಬಾಡಿಗೆ ಕಟ್ಟಲೂ ಅವರೆಲ್ಲ ಹೆಣಗಾಡುತ್ತಿದ್ದಾರೆ. ಎಷ್ಟೋ ಮಂದಿ ಮಳಿಗೆ ಖಾಲಿ ಮಾಡಿದ್ದಾರೆ.

ಇದನ್ನೂ ಓದಿ:'ನಮ್ಮೂರಿಗೆ ಅಕೇಶಿಯ ಬೇಡ' : ಶಿವಮೊಗ್ಗದಲ್ಲಿ ಪ್ರತಿಭಟನೆ.. ಪೊಲೀಸರೊಂದಿಗೆ ವಾಗ್ವಾದ

ಅನ್​ಲಾಕ್​ ನಂತರವಾದರೂ ಉದ್ಯಮ ಚೇತರಿಸಿಕೊಳ್ಳಲಿದೆ ಎಂಬ ನಿರೀಕ್ಷೆಗೆ ಆನ್​ಲೈನ್​ ವ್ಯವಸ್ಥೆ ಮತ್ತಷ್ಟು ಪೆಟ್ಟು ಕೊಟ್ಟಿದೆ. ಕೋವಿಡ್​ದಿಂದಾಗಿ ಹೊರ ಹೋಗಲು ಹಿಂಜರಿಯುತ್ತಿದ್ದ ಕಾರಣ ಪುಸ್ತಕ ಪ್ರೇಮಿಗಳು ಆನ್​​ಲೈನ್​ ಮೂಲಕ ಪುಸ್ತಕ ಖರೀದಿಸುತ್ತಿದ್ದರು. ಇದು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ತಲೆನೋವು ತರಿಸಿದೆ.

ಕೊರೊನಾ ಹೊಡೆತಕ್ಕೆ ನಲುಗಿದ ಪುಸ್ತಕೋದ್ಯಮ

ಇನ್ನು ಹೊಸದಾಗಿ ಉದ್ಯಮ ಆರಂಭಿಸಲು ಯಾರೂ ಸಿದ್ಧರಿಲ್ಲ. ಕೆಲವರು ಹಾಕಿದ ಬಂಡವಾಳ ಬಾರದೆ ಕಷ್ಟಪಡುತ್ತಿದ್ದಾರೆ. ಶಾಲಾ-ಕಾಲೇಜು ನಡೆಯುತ್ತಿದ್ದರೆ ಮಾತ್ರ ವ್ಯಾಪಾರ ನಡೆಯತ್ತದೆ. ಸದ್ಯ ಶಾಲಾ-ಕಾಲೇಜುಗಳು ಆರಂಭವಾದರೂ ವ್ಯಾಪಾರ ಅಷ್ಟಕಷ್ಟೆ. ಕಾರ್ಮಿಕರಿಗೆ ವೇತನ ಪಾವತಿಸಲು ಮಾಲೀಕರಿಗೆ ಸಾಧ್ಯವಾಗದಾಗಿದೆ.

ABOUT THE AUTHOR

...view details