ಶಿವಮೊಗ್ಗ:ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ಚುನಾವಣಾ ಅಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.
ಸಿಎಂ ಹೆಚ್ಡಿಕೆ ಹೆಲಿಕಾಪ್ಟರ್ಗೂ ತಟ್ಟಿದ ಬಿಸಿ... ಅಧಿಕಾರಿಗಳಿಂದ ಸಂಪೂರ್ಣ ತಪಾಸಣೆ! - ಅಧಿಕಾರಿಗಳು
ಲೋಕಸಭಾ ಚುನಾವಣಾ ಕಾವು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪನವರ ಪರವಾಗಿ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಪ್ರಚಾರಕ್ಕೆ ಬಂದಾಗ ಸಿಎಂ ಹೆಲಿಕಾಪ್ಟರ್ ತಪಾಸಣೆ.
ತಪಾಸಣೆ
ಹೌದು, ಇದೀಗ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಲಿಕಾಪ್ಟರ್ಗೂ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿದ್ದು, ಹೆಲಿಕಾಪ್ಟರ್ ಅನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪನವರ ಪರವಾಗಿ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಪ್ರಚಾರಕ್ಕೆ ಬಂದಾಗ ಅವರ ಹೆಲಿಕಾಪ್ಟರ್ಅನ್ನು ಚುನಾವಣಾ ಅಧಿಕಾರಿಗಳು ಸಂಪೂರ್ಣ ತಪಾಸಣೆ ನಡೆಸಿದ್ದಾರೆ.