ಕರ್ನಾಟಕ

karnataka

ETV Bharat / state

ಕ್ರೈಸ್ತ ಸಮುದಾಯಕ್ಕೆ ಆರ್ಥಿಕ ಪ್ಯಾಕೇಜ್​ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ - shivamogga latest news

ದೇಶವೇ ಲಾಕ್​ಡೌನ್​ನಿಂದ ತತ್ತರಿಸಿದೆ. ಅದರಂತೆ ಕ್ರೈಸ್ತ ಸಮುದಾಯದ ಸಭಾಪಾಲಕರಿಗೆ ಜೀವನ ನಡೆಸುವುದು ತುಂಬಾ ಕಷ್ಟವಾಗಿದ್ದು, ಅವರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

christian organisation
ಅಖಿಲ ಭಾರತ ಕ್ರೈಸ್ತ ಮಹಾಸಭಾ

By

Published : Jun 5, 2020, 8:22 PM IST

ಶಿವಮೊಗ್ಗ:ಕ್ರೈಸ್ತ ಸಮುದಾಯದ ಗುರುಗಳಾದ ಸಭಾಪಾಲಕರಿಗೆ ಆರ್ಥಿಕ ಪ್ಯಾಕೇಜ್ ಹಾಗೂ ಆಹಾರ ಪದಾರ್ಥಗಳ ನೆರವು ನೀಡುವಂತೆ ಆಗ್ರಹಿಸಿ ಅಖಿಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ದೇಶವೇ ಲಾಕ್​ಡೌನ್​ನಿಂದ ತತ್ತರಿಸಿದೆ. ಅದರಂತೆ ಕ್ರೈಸ್ತ ಸಮುದಾಯದ ಸಭಾಪಾಲಕರಿಗೆ ಜೀವನ ನಡೆಸುವುದು ತುಂಬಾ ಕಷ್ಟವಾಗಿದ್ದು, ಅವರ ನೆರವಿಗೆ ಸರ್ಕಾರ ಧಾವಿಸಬೇಕು. ಇಲ್ಲವಾದರೆ ಬದುಕು ನಡೆಸುವುದು ಕಷ್ಟವಾಗುತ್ತದೆ. ಸರ್ಕಾರ ಕೂಡಲೇ ಆರ್ಥಿಕವಾಗಿ ಹಾಗೂ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ನಮ್ಮ ನೆರವಿಗೆ ಬರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ABOUT THE AUTHOR

...view details