ಶಿವಮೊಗ್ಗ :ಬಸ್ನಲ್ಲಿ ಯಾವುದಾದರೂ ವಸ್ತುಗಳನ್ನು ಸಾಗಿಸುವಾಗ ಅಥವಾ ಮಕ್ಕಳೊಂದಿಗೆ ಪ್ರಯಾಣಿಸುವಾಗ ಅರ್ಧ ಟಿಕೆಟ್ ಮಾಡುವುದು ಸಹಜ. ಆದ್ರೆ, ಕೋಳಿ ಮರಿಗೆ ಬರೋಬ್ಬರಿ 52 ರೂ. ಬಸ್ ಚಾರ್ಜ್ ಹಾಕಿರುವ ಘಟನೆ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ.
ಎಲ್ಲಾದ್ರೂ ಇದನ್ನ ಕಂಡೀರಾ, ಕೇಳೀರಾ.. ಹೊಸನಗರದಿಂದ ಬೈಂದೂರಿನ ಶಿರೂರಿಗೆ ಅಲೆಮಾರಿ ಕುಟುಂಬವೊಂದು ಸರ್ಕಾರಿ ಬಸ್ನಲ್ಲಿ ಪ್ರಯಾಣ ಬೆಳೆಸುತ್ತಿತ್ತು. ಆಗ ಕಂಡಕ್ಟರ್ ಬಂದು ಎಲ್ಲಿಗೆ ಎಂದು ಕೇಳಿದ್ದಾನೆ. ಆಗ ಕುಟುಂಬ ಶಿರೂರು ಎಂದ್ಹೇಳಿ ಮೂರು ಟಿಕೆಟ್ ಪಡೆದುಕೊಂಡಿದೆ.
ಆಗ ಒಂದು ಪುಟ್ಟ ಚೀಲದಿಂದ ಚಿವ್.. ಚಿವ್ ಎಂಬ ಶಬ್ಧ ಬಂದಿದೆ. ಇದನ್ನು ಆಲಿಸಿದ ಬಸ್ ಕಂಡಕ್ಟರ್, ಚೀಲದಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕುಟುಂಬ ಒಂದು ಕೋಳಿ ಮರಿ ಇದೆ ಎಂದಿದೆ. ಕೂಡಲೇ ನಿರ್ವಾಹಕ ಅದಕ್ಕೂ ಟಿಕೆಟ್ ಮಾಡಬೇಕೆಂಬ ನಿಯಮವಿದೆ ಎಂದ್ಹೇಳಿ ಬರೋಬ್ಬರಿ ರೂ.52 ರೂ. ಚಾರ್ಜ್ ಹಾಕಿದ್ದಾರೆ.
ಶಿರಸಿ-ಸಿದ್ದಾಪುರದಿಂದ ಬಂದ ಆ ಕುಟುಂಬ 10 ರೂಪಾಯಿ ಕೊಟ್ಟು ಕೋಳಿ ಮರಿ ತಂದಿದ್ದರು. ಆದರೆ, ಬಸ್ನಲ್ಲಿ ಟಿಕೆಟ್ ದರ ನೋಡಿ ಮೂಗಿಗಿಂತ ಮೂಗುತಿ ಭಾರ ಅಂದಂಗಾಯ್ತು ಎಂದು ಗೊಣಗಿಕೊಂಡರು.