ಕರ್ನಾಟಕ

karnataka

ETV Bharat / state

ಅಪರೂಪದ ಅವಳಿ ಕರುಗಳಿಗೆ ಜನ್ಮ ನೀಡಿದ ಎಮ್ಮೆ - ಎಮ್ಮೆ

ಶಿವಮೊಗ್ಗ ಜಿಲ್ಲೆಯಲ್ಲಿ ಎಮ್ಮೆಯೊಂದು ಅವಳಿ ಕರುಗಳಿಗೆ ಜನ್ಮ ನೀಡುವ ಮೂಲಕ ಗಮನ ಸೆಳೆದಿದೆ.

ಅವಳಿ ಕರುಗಳಿಗೆ ಜನ್ಮ ನೀಡಿದ ಎಮ್ಮೆ

By

Published : Mar 22, 2019, 4:41 PM IST


ಶಿವಮೊಗ್ಗ: ಅವಳಿ ಕರುಗಳಿಗೆ ಜನ್ಮ ನೀಡಿದ ಹಸುಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಎಮ್ಮೆಯೊಂದು ಅಪರೂಪದ ಅವಳಿ ಕರುಗಳಿಗೆ ಜನ್ಮ ನೀಡಿ ಎಲ್ಲರ ಗಮನ ಸೆಳೆದಿದೆ.

ಅವಳಿ ಕರುಗಳಿಗೆ ಜನ್ಮ ನೀಡಿದ ಎಮ್ಮೆ

ಜಿಲ್ಲೆಯ ಹೊಸನಗರ ತಾಲೂಕಿನ ಕಿಲಗಾರು ಗ್ರಾಮದ ಮಂಜಾದ್ರಿಗೌಡ ಎಂಬುವರ ಮನೆಯಲ್ಲಿ ಎಮ್ಮೆಯೊಂದು ಚೊಚ್ಚಲ ಹೆರಿಗೆಯಲ್ಲಿ ಅವಳಿ ಕರುಗಳಿಗೆ ಜನ್ಮ ನೀಡಿದೆ. ಅದರಲ್ಲೂ ಒಂದು ಗಂಡು ಮತ್ತೊಂದು ಹೆಣ್ಣು ಕರುವಿಗೆ ಜನ್ಮ ನೀಡಿದ್ದು ರೈತ ಮಂಜಾದ್ರಿಗೌಡರ ಕುಟುಂಬಕ್ಕೆ ಸಂಭ್ರಮವಾಗಿದೆ.

ಅವಳಿ ಕರುಗಳಿಗೆ ಜನ್ಮ ನೀಡಿದ ಎಮ್ಮೆ

ಒಂದು ಕಪ್ಪಗಿನ ಮತ್ತು ಬಿಳಿ ಬಣ್ಣದ ಅವಳಿ ಎಮ್ಮೆ ಕರುಗಳು ನೋಡಲು ಮುದ್ದಾಗಿವೆ. ತಾಯಿ ಎಮ್ಮೆಯೊಂದಿಗೆ ಕರುಗಳು ಲವಲವಿಕೆಯಿಂದಿದ್ದು ನೋಡುಗರನ್ನು ಆಕರ್ಷಿಸುತ್ತಿವೆ.

ಎಮ್ಮೆ ಅವಳಿ ಕರುಗಳಿಗೆ ಜನ್ಮ ನೀಡಿರುವುದು ಖುಷಿ ವಿಷಯ. ಆದರೆ ಎಮ್ಮೆ ಕೆಚ್ಚಲಿನಲ್ಲಿ ಎರಡು ಕರುಗಳಿಗೆ ಬೇಕಾಗುವಷ್ಟು ಹಾಲು ಇರದಿರುವುದು ಕುಟುಂಬದವರ ಬೇಸರಕ್ಕೂ ಕಾರಣವಾಗಿದೆ. ಕರುಗಳಿಗೆ ಇತರೆ ಹಸುವಿನ ಹಾಲನ್ನು ನೀಡಲಾಗುತ್ತಿದೆ ಎಂದು ಮಜಾಂದ್ರಿಗೌಡ ಕುಟುಂಬಸ್ಥರು ತಿಳಿಸಿದ್ದಾರೆ.

ABOUT THE AUTHOR

...view details