ಶಿವಮೊಗ್ಗ :ಸೈಕಲ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ (Boy died in Shimoga Accident) ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೊರಬ ತಾಲೂಕಿನ ತೋರಗೊಂಡನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸೈಕಲ್ಗೆ ಟಿಪ್ಪರ್ ಡಿಕ್ಕಿ..13 ವರ್ಷದ ಬಾಲಕ ಸಾವು.. - 13 ವರ್ಷದ ಬಾಲಕ ಸಾವು
ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ (Boy died in Shimoga Accident)..
Accident
ಸೊರಬ ತಾಲೂಕಿನ ಕಾನುಗೋಡು ಗ್ರಾಮದ ಜೀವ (13) ಮೃತ ಬಾಲಕ. ಸಿದ್ದಾಪುರದಿಂದ ಚಂದ್ರಗುತ್ತಿ ಕಡೆ ತೆರಳುತ್ತಿದ್ದ ಟಿಪ್ಪರ್ ಸೈಕಲ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಸೈಕಲ್ನಲ್ಲಿ ಹಿಂಬದಿ ಸೀಟಿನಲ್ಲಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸೈಕಲ್ ಸವಾರ ಕಾನುಗೋಡು ಗ್ರಾಮದ ಸಂದೀಪ್ (32) ತೀವ್ರವಾಗಿ ಗಾಯಗೊಂಡಿದ್ದಾರೆ. ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.