ಶಿವಮೊಗ್ಗ: ಬಿಜೆಪಿ ಸುಸಂಸ್ಕೃತ ಜನರ ಪಕ್ಷವೋ, ರೌಡಿಗಳ ಪಕ್ಷವೊ ಅಂತ ಜನ ತೀರ್ಮಾನ ಮಾಡಿ ಬಿಟ್ಟಿದ್ದಾರೆ. ಬಿಜೆಪಿ ಸುಸಂಸ್ಕೃತ ಪಕ್ಷ ಅಂತ ತೀರ್ಮಾನ ಮಾಡಿ ಕೇಂದ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ರೌಡಿಗಳ ಪಕ್ಷ ಅಂತ ತಿರಸ್ಕಾರ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದ ಕೆಪಿಸಿಸಿ ಅಧ್ಯಕ್ಷರು ಯಾರು, ಮೊನ್ನೆ ತನಕ ತಿಹಾರ್ ಜೈಲ್ ನಲ್ಲಿದ್ದು, ಹೊರಗೆ ಬಂದ್ರೂ. ಯಾವಾಗ ಮತ್ತೆ ಜೈಲಿಗೆ ಹೋಗ್ತಾರೆ ಅಂತ ಗೂತ್ತಿಲ್ಲ. ಇಂಥವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವೂ ಇದೆ. ಎರಡನೇಯದು ಯುವ ಕಾಂಗ್ರೆಸ್ ಅಧ್ಯಕ್ಷ ಬಾರ್ ನಲ್ಲಿ ಕುಡಿದು ಹೊಡೆದಾಡಿ. ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಂತಹ ನಲಪಾಡ್ ಕೈಯಲ್ಲಿ ಕಾಂಗ್ರೆಸ್ ಇದೆ. ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡ್ತಾರೆ, ಯಾವುದು ರೌಡಿಗಳ ಪಕ್ಷ ಅಂತ ಹೀಗಾಗಿ ಬಿಜೆಪಿ ಸುಂಸ್ಕೃತ ಪಕ್ಷವಾಗಿದೆ ಅಂತ ನಾನು ಹೇಳುತ್ತೇನೆ ಎಂದರು.
ರಸ್ತೆಯಲ್ಲಿ ಹೋಗುವ ನಾಯಿ ಸಹ ಜೆಡಿಎಸ್ ಗೆ ಹೋಗಲ್ಲ:ಇಬ್ರಾಹಿಂಗೆ ಬೇರೆ ಕೆಲಸವಿಲ್ಲ. ರಸ್ತೆಯಲ್ಲಿ ಹೋಗುವ ನಾಯಿ ಸಹ ಜೆಡಿಎಸ್ ಗೆ ಹೋಗಲ್ಲ. ರಮೇಶ್ ಜಾರಕಿಹೊಳಿ ಅಂಥವರು ಸರ್ಕಾರ ತಂದವರು, ಅವರು ಯಾಕೆ ಜೆಡಿಎಸ್ ಗೆ ಹೋಗ್ತಾರೆ. ಬಿಜೆಪಿ ಬಿಟ್ಟು ಏನೂ ಇಲ್ಲದ ಜೆಡಿಎಸ್ಗೆ ಹೋಗ್ತಾರಾ?
ಇಬ್ರಾಹಿಂಗೆ ಏನಾಗಿದೆ, ಈಗ ಅಲ್ಲಿಗೆ ಹೋಗಿ ಆಗಿದೆ. ಹೋದ ಮೇಲೆ ಏನಾದರೂ ಮಾಡಬೇಕು ಎನ್ನುವ ಒಂದೇ ಕಾರಣಕ್ಕೆ ಅವರು ಬರ್ತಾರೆ, ಇವರು ಬರ್ತಾರೆ ಅಂತ ಹೇಳ್ತಾ ಇದ್ದಾರೆ. ಇಬ್ರಾಹಿಂ ಅರ್ಥ ಇಲ್ಲದ ಹೇಳಿಕೆ ನೀಡಿದ್ದಾರೆ. ಇದರಿಂದ ನಾನು ಅವರ ಈ ಹೇಳಿಕೆ ಖಂಡನೆ ಮಾಡ್ತಿನಿ ಎಂದು ತಿಳಿಸಿದರು.
ಒಂದಿಂಚೂ ಭೂಮಿ ಮಹಾರಾಷ್ಟ್ರಕ್ಕೆ ಹೋಗಲ್ಲ: ಮಹಾಜನ್ ವರದಿ ಪ್ರಕಾರ ರಾಜ್ಯದ ಮಹಾರಾಷ್ಟ್ರ ಸಿಎಂ ಬಂದರೂ, ಸಹ ಕರ್ನಾಟಕ ಒಂದು ಇಂಚು ಭೂಮಿ ಸಹ ಹೋಗುವ ಪ್ರಶ್ನೆಯೇ ಇಲ್ಲ. ಇದಕ್ಕಿದ್ದಂತೆ ಮಹಾರಾಷ್ಟ್ರದವರು ಸುಮ್ಮನೆ ಗಡಿಕ್ಯಾತೆ ತೆಗೆಯುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಎಲ್ಲ ಪಕ್ಷದವರು, ಆರೂವರೆ ಕೋಟಿ ಕನ್ನಡಿಗರು ಒಟ್ಟಾಗಿ ಇದ್ದೇವೆ. ಒಂದಿಂಚು ಭೂಮಿ ಸಹ ಎಲ್ಲಿಯೂ ಹೋಗಲು ಬಿಡುವುದಿಲ್ಲ ಎಂದರು.