ಕರ್ನಾಟಕ

karnataka

ETV Bharat / state

'ಸಿಗಂದೂರು ಕ್ಷೇತ್ರದ ವಿಷಯಕ್ಕೆ ಕೈಹಾಕಿ, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ'

ಸಿಗಂದೂರು ದೇವಸ್ಥಾನಕ್ಕೆ ಕೈ ಹಾಕಿದರೆ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಆರು ತಿಂಗಳ ಹಿಂದೆಯೇ ಹೇಳಿದ್ದೆ. ಅದು ಈಗ ನಿಜವಾಗಿದೆ‌. ಇನ್ನೂ ಮೂರು ಜನ ಇದ್ದಾರೆ. ಅವರು ಸಹ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದರು. ನಾನು ಯಾವುದೇ ಪಕ್ಷ ಇರಬಹುದು. ಆದರೆ, ಅವರಂತೆ ನಾನು ಮಾಡುವುದಿಲ್ಲ. ನಮ್ಮ ಈಡಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು..

beluru-gopala-krishna-talk-about-cm-yadiyurappa
ಬೇಳೂರು ಗೋಪಾಲಕೃಷ್ಣ ಮತ್ತು ಬಿಎಸ್​ವೈ

By

Published : Aug 1, 2021, 5:50 PM IST

ಶಿವಮೊಗ್ಗ :ಸಿಗಂದೂರು ಕ್ಷೇತ್ರದ ವಿಷಯಕ್ಕೆ ಕೈ ಹಾಕಿಯೇ ಯಡಿಯೂರಪ್ಪ ಅವರು ತಮ್ಮ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ನಗರದ ಈಡಿಗರ ಭವನದಲ್ಲಿ ಆಯೋಜಿಸಿದ್ದ ಸಿಗಂದೂರು ದೇವಸ್ಥಾನಕ್ಕೆ ಸರ್ಕಾರದ ಹಸ್ತಕ್ಷೇಪ ಹಾಗೂ ಈಡಿಗ ನಿಗಮ ಮಂಡಳಿ ಸ್ಥಾಪಿಸುವ ಕುರಿತು ಹಾಗೂ ಈಡಿಗ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿಗಂದೂರು ದೇವಸ್ಥಾನಕ್ಕೆ ಕೈ ಹಾಕಿದರೆ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಆರು ತಿಂಗಳ ಹಿಂದೆಯೇ ಹೇಳಿದ್ದೆ. ಅದು ಈಗ ನಿಜವಾಗಿದೆ‌. ಇನ್ನೂ ಮೂರು ಜನ ಇದ್ದಾರೆ. ಅವರು ಸಹ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದರು. ನಾನು ಯಾವುದೇ ಪಕ್ಷ ಇರಬಹುದು. ಆದರೆ, ಅವರಂತೆ ನಾನು ಮಾಡುವುದಿಲ್ಲ. ನಮ್ಮ ಈಡಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಚಿಂತನ ಮಂಥನ ಕಾರ್ಯಕ್ರಮದ ಉದ್ಘಾಟನೆ

ಈಡಿಗ ಕೋಟಾದಡಿಯಲ್ಲಿ ಸಚಿವ ಸ್ಥಾನ ತೆಗೆದುಕೊಂಡ ಕೋಟ ಶ್ರೀನಿವಾಸ್ ಪೂಜಾರಿ ಅವರು ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಿದಾಗ ಒಂದೇ ಒಂದು ಮಾತನಾಡಲಿಲ್ಲ. ಇದು ದುರಾದೃಷ್ಟಕರ ಎಂದರು.

ರಾಜ್ಯದಲ್ಲಿ 55 ಲಕ್ಷ ಇರುವ ನಮಗೆ ಇಲ್ಲಿಯವರೆಗೂ ನಿಗಮ ಮಂಡಳಿ ಆಗಿಲ್ಲ. ಹಾಗಾಗಿ, ಸಮುದಾಯದ ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ. ಪಕ್ಷ ಬೇಧವೆನ್ನದೇ ಸಮಾಜವನ್ನು ಒಗ್ಗೂಡಿಸಬೇಕು ಎಂದು ತಿಳಿಸಿದರು. ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರು ಮಾತನಾಡಿ, ಸಿಗಂದೂರು ದೇವಸ್ಥಾನದ ವಿಷಯಕ್ಕೆ ಯಾರೇ ಕೈ ಹಾಕಿದರೂ ಸುಟ್ಟು ಹೋಗುತ್ತಾರೆ ಎಂದು ಶಾಪ ಹಾಕಿದರು.

ಓದಿ:ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯ

ABOUT THE AUTHOR

...view details