ಶಿವಮೊಗ್ಗ :ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಯನೂರು ಅವರು, ಚುನಾವಣೆಯ ಫಲಿತಾಂಶದ ಬಳಿಕ ಸರ್ಕಾರ ಪತನವಾಗುತ್ತದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತಹ ಎಲ್ಲಾ ಸ್ಪಷ್ಟ ಲಕ್ಷಣಗಳು ಮತ್ತು ಸೂಚನೆಗಳನ್ನ ಆಡಳಿತ ಪಕ್ಷವಾಗಿರುವ ಮೈತ್ರಿಕೂಟದ ಪಕ್ಷದವರೇ ಕೊಡುತ್ತಿದ್ದಾರೆ. ಖಂಡಿತವಾಗಿಯೂ ರಾಜ್ಯಕ್ಕೆ ಮತ್ತು ಬಿಜೆಪಿಗೆ ಒಳ್ಳೆಯ ದಿನಗಳು ಬರುತ್ತವೆ ಎಂದರು.
ರಾಜ್ಯದಲ್ಲಿ ಈಗಾಗಲೇ ಮೈತ್ರಿ ಪಕ್ಷದ ಮಧ್ಯೆ ಬಹಳ ದೊಡ್ಡ ಹೋರಾಟ ಪ್ರಾರಂಭವಾಗಿದೆ. ಒಬ್ಬರಿಗೊಬ್ಬರು ವಿರೋಧ ಪಕ್ಷಗಳಿಗಿಂತಲೂ ಹೆಚ್ಚು ಕಿತ್ತಾಡುತ್ತಿದ್ದಾರೆ. ಯಾರನ್ನ ಮುಖ್ಯಮಂತ್ರಿ ಮಾಡಬೇಕು ಎನ್ನುವ ಹೆಸರುಗಳ ಚಲಾವಣೆಗೆ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಆಗಬೇಕು, ರೇವಣ್ಣ ಆಗಬೇಕು, ಮಲ್ಲಿಕಾರ್ಜುನ್ ಖರ್ಗೆ ಆಗಬೇಕು ಎಂದು ಹೇಳುತ್ತಿದ್ದಾರೆ. ಆದರೆ ಆ ಹೆಸರುಗಳ ಪಟ್ಟಿಯಲ್ಲಿ ಕುಮಾರಸ್ವಾಮಿ ಅವರ ಹೆಸರೇ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.