ಶಿವಮೊಗ್ಗ:ಕುಷ್ಠರೋಗ ವಿರೋಧಿ ದಿನಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಥಾ ನಡೆಸಲಾಯಿತು.
ಶಿವಮೊಗ್ಗದಲ್ಲಿ ಕುಷ್ಠ ರೋಗದ ಕುರಿತು ಜಾಗೃತಿ ಜಾಥಾ - ಕುಷ್ಠರೊಗದ ಕುರಿತು ಜಾಗೃತಿ ಜಾಥಾ
ರಾಷ್ಟ್ರೀಯ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನದಡಿಯಲ್ಲಿ ಕುಷ್ಠರೋಗ ವಿರುದ್ಧ ಅಂತಿಮ ಯುದ್ಧ ಎಂಬ ಘೋಷ ವಾಕ್ಯದಡಿಯಲ್ಲಿ ಶಿವಮೊಗ್ಗದಲ್ಲಿ ಜಾಥಾ ನಡೆಸಲಾಯಿತು.

ಜಿಲ್ಲಾ ನ್ಯಾಯಾಲಯದ ಮುಂಭಾಗದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾಸ್ಟರ್ ಮಹಾಸ್ವಾಮೀಜಿ ಜಾಥಾಗೆ ಚಾಲನೆ ನೀಡಿದ್ರು. ರಾಷ್ಟ್ರೀಯ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನದಡಿಯಲ್ಲಿ ಕುಷ್ಠರೋಗ ವಿರುದ್ಧ ಅಂತಿಮ ಯುದ್ಧ ಎಂಬ ಘೋಷ ವಾಕ್ಯದಡಿ ಈ ಜಾಥಾ ನಡೆಸಲಾಯಿತು. ಕುಷ್ಠರೋಗವನ್ನು ತಡೆಗಟ್ಟುವುದು ಹೇಗೆ, ಮತ್ತು ಇದಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸುವುದು ಹೇಗೆ ಎಂಬ ಕುರಿತಂತೆ, ಜಾಗೃತಿ ಮೂಡಿಸಲಾಯಿತು. ಅಲ್ಲದೆ ಸಾರ್ವಜನಿಕರಲ್ಲಿ ಕುಷ್ಠರೋಗದ ಕುರಿತಂತೆ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಆಸ್ಪತ್ರೆಗಳ ವೈದ್ಯರು, ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.