ಶಿವಮೊಗ್ಗ:ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಜಾತ್ರೆಗೆ ಪಾದಯಾತ್ರೆಗೆ ಬಂದಿದ್ದ ಭಕ್ತರ ಮೇಲೆ ಮಿನಿ ಲಾರಿ ಹರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿರಾಳಕೊಪ್ಪ ಬಳಿ ನಡೆದಿದೆ.
ಜಾತ್ರೆಗೆ ಪಾದಯಾತ್ರೆ ಮಾಡುತ್ತಿದ್ದ ಭಕ್ತರ ಮೇಲೆ ಹರಿದ ಲಾರಿ: ಇಬ್ಬರ ಸಾವು, ಇಬ್ಬರಿಗೆ ಗಾಯ - ಸಾವು
ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಜಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಮಿನಿ ಲಾರಿ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ನಡೆದಿದೆ.
ಮೃತಪಟ್ಟ ಭಕ್ತರು
ಶಂಕರ ಗೌಡ ಪಾಟೀಲ್ ಹಾಗೂ ರಾಜಶೇಖರ್ ಮೃತಪಟ್ಟ ಭಕ್ತರು. ಮೃತರು ಹಾಗೂ ಗಾಯಾಳುಗಳು ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಅಕ್ಕಿ ಆಲೂರಿನವರು ಎಂದು ಗುರುತಿಸಲಾಗಿದೆ. ಮೃತರು ಅಕ್ಕಿ ಆಲೂರಿನಿಂದ ತೊಗರ್ಸಿ ಜಾತ್ರೆಗೆ ಪಾದಯಾತ್ರೆಯಿಂದ ಆಗಮಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ನಾಳೆ ತೊಗರ್ಸಿ ಮಲ್ಲಿಕಾರ್ಜುನ ಜಾತ್ರೆ ಇರುವ ಕಾರಣ ತೇರು ನೋಡಲು ಪಾದಯಾತ್ರೆ ಮೂಲಕ 15 ಜನರ ತಂಡ ಆಗಮಿಸುತ್ತಿತ್ತು. ಗಾಯಾಳುಗಳು ಶಿಕಾರಿಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.