ಮುಗುಚಿ ಬಿದ್ದ ಟ್ರ್ಯಾಕ್ಟರ್ ; ಚಾಲಕ ದುರ್ಮರಣ
ಟ್ರ್ಯಾಕ್ಟರ್ ನಿಂದ ಮಣ್ಣನ್ನು ಖಾಲಿ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ಮಗುಚಿ ಟ್ರಾಲಿ ಕೆಳಗೆ ಚಾಲಕ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗದ ರಿಪ್ಪನ್ ಪೇಟೆ ಬಳಿ ನಡೆದಿದೆ.
ಟ್ರ್ಯಾಕ್ಟರ್ ಮಗುಚಿ ವ್ಯಕ್ತಿ ಸಾವು
ಶಿವಮೊಗ್ಗ: ಮಣ್ಣು ಅನ್‌ಲೋಡ್ ಮಾಡುವಾಗ ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಿಪ್ಪನ್ ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಗೆರೆಯಲ್ಲಿ ನಡೆದಿದೆ.ಕಣಬಂದೂರು ನಿವಾಸಿ 22 ವರ್ಷದ ಮಂಜು ಮೃತ ಟ್ರ್ಯಾಕ್ಟರ್ ಚಾಲಕ. ಘಟನೆ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jun 7, 2019, 9:28 PM IST