ಕರ್ನಾಟಕ

karnataka

ETV Bharat / state

ಅಪ್ಪನಿಲ್ಲ.. ಅಮ್ಮನೂ ಇಲ್ಲ.. ಸಾವು ಅರಿಯದ ಕಂದನಿಂದ ಸ್ವರ್ಗವಾಸಿ ತಂದೆಗೆ ನಿತ್ಯ ಕರೆ!

ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡಿರುವ ಪುಟಾಣಿ ಸಮ್ಯಾಳಿಗೆ ಶರಣ್ ಸಹೋದರಿ ಅಖಿಲಾ ಆಸರೆ ಆಗಿದ್ದಾರೆ. ಎರಡು ವರ್ಷದ ಹಿಂದೆ ತಾಯಿ ಕಳೆದುಕೊಂಡ ದಿನದಿಂದ ಸಮ್ಯಾ ಅಖಿಲಾ ಅವರ ಜೊತೆ ಬೆಳೆಯುತ್ತಿದ್ದಳು. ಜೊತೆಗೆ ಅವರನ್ನೇ ತಾಯಿ‌ ಅಂದುಕೊಂಡಿದ್ದಳು. ಇದೀಗ ಈ ಪುಟಾಣಿಗೆ ಅವರೇ ಎಲ್ಲವೂ ಆಗಿದ್ದಾರೆ..

A girl become orphan after father death
ಕೋವಿಡ್​ಗೆ ಬಲಿಯಾದ ಅಪ್ಪ-ಅಮ್ಮ

By

Published : Jul 3, 2021, 8:10 PM IST

Updated : Jul 7, 2021, 3:57 PM IST

ಶಿವಮೊಗ್ಗ :ಇಲ್ಲೊಂದು ಪುಟ್ಟ ಕಂದ ಸ್ವರ್ಗದಲ್ಲಿರುವ ತನ್ನ ಅಪ್ಪನಿಗೆ ನಿತ್ಯವೂ ಹಲವು ಬಾರಿ ಕರೆ ಮಾಡುತ್ತೆ. ತಂದೆ ಇಹಲೋಕದಲ್ಲಿಲ್ಲ ಎಂಬ ಸತ್ಯವನ್ನೇ ಅರಿಯದ ಈ ಮುಗ್ಧ ಮಗುವಿನ ಮಾತು ಎಂಥವರ ಕಣ್ಣುಗಳನ್ನೂ ಸಹ ಒದ್ದೆಯಾಗಿಸುತ್ತದೆ.

ಸ್ವರ್ಗದಲ್ಲಿರುವ ತಂದೆಗೆ ಪದೇ ಪದೇ ಕರೆ ಮಾಡುವ ಪುಟಾಣಿ

ಹೀಗೆ ಮೊಬೈಲ್ ಹಿಡಿದು ಅಪ್ಪ, ಅಪ್ಪ ಎಂದು ಕರೆ ಮಾಡುವ ಪುಟಾಣಿ ಹೆಸರು ಸಮ್ಯಾ. ಸಮ್ಯಾಳಿಗೆ ಈಗ ಮೂರು ವರ್ಷ. ಸಮ್ಯಾ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶರಣ್ ಎಂಬುವರ ಮಗಳು. ಸಮ್ಯಾ ತಾಯಿ ತೀರಿದಾಗ ಈ ಪುಟಾಣಿಗೆ ಒಂದು ವರ್ಷವಾಗಿತ್ತು. ಅಂದಿನಿಂದ ಈ ಪುಟಾಣಿಯ ಜವಾಬ್ದಾರಿಯನ್ನು ಹೊತ್ತಿದ್ದು ಈಕೆಯೆ ತಂದೆ ಶರಣ್. ತಂದೆಯೇ ಸಮ್ಯಾಳಿಗೆ ತಾಯಿಯಾಗಿದ್ದರು. ಆದರೆ, ವಿಧಿಯ ಕಲ್ಲು ಮನಸ್ಸಿಗೆ ಇದ್ಯಾವುದೂ ಲೆಕ್ಕವೇ ಅಲ್ಲ ನೋಡಿ. ಅಮ್ಮನಿಲ್ಲದ ಪುಟ್ಟ ಮಗುವಿನ ತಂದೆ ಶರಣ್ ಸಹ ಕೋವಿಡ್​ಗೆ ಬಲಿಯಾದರು.

ಶರಣ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದರು. ಕೊರೊನಾ ಮೊದಲ ಲಾಕ್​ಡೌನ್​ನಲ್ಲಿ ಶರಣ್ ಬೆಂಗಳೂರು ಬಿಟ್ಟು, ತಮ್ಮೂರಿಗೆ ವಾಪಸ್ ಆಗಿದ್ದರು. ನಂತರ ಶಿವಮೊಗ್ಗದಲ್ಲಿಯೇ ಕೆಲಸ ಹುಡುಕಿಕೊಂಡಿದ್ದರು. ತಮ್ಮ ಉದ್ಯೋಗದ ಜೊತೆ ಜೊತೆಗೆ ಸಂಸ್ಕೃತಿ ಫೌಂಡೇಶನ್ ಎಂಬ ಸಂಸ್ಥೆ ಸ್ಥಾಪಿಸಿದ್ದರು. ಈ ಫೌಂಡೇಷನ್ ಮೂಲಕ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದ್ದರು.

ಕೊರೊನಾ 2ನೇ ಅಲೆ ಆರಂಭವಾದ ಸಂದರ್ಭದಲ್ಲಿ ಶರಣ್ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಸುಮಾರು 10 ಸಾವಿರ ಮಂದಿಗೆ ಎನ್ 95 ಮಾಸ್ಕ್, ಸ್ಯಾನಿಟೈಸರ್ ಹಾಗೂ ದಿನಸಿ ಕಿಟ್ ವಿತರಿಸಿದ್ದರು. ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ಶರಣ್‌ಗೆ ಸೋಂಕು ತಗುಲಿ ಕಳೆದ ಒಂದು ತಿಂಗಳ ಹಿಂದೆ ಬಲಿಯಾದರು. ಇದೀಗ ಶರಣ್ ಪುತ್ರಿ ಸಮ್ಯಾ ಅಪ್ಪನನ್ನು ಕಳೆದುಕೊಂಡು ಅನಾಥವಾಗಿದ್ದಾಳೆ.

ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡಿರುವ ಪುಟಾಣಿ ಸಮ್ಯಾಳಿಗೆ ಶರಣ್ ಸಹೋದರಿ ಅಖಿಲಾ ಆಸರೆ ಆಗಿದ್ದಾರೆ. ಎರಡು ವರ್ಷದ ಹಿಂದೆ ತಾಯಿ ಕಳೆದುಕೊಂಡ ದಿನದಿಂದ ಸಮ್ಯಾ ಅಖಿಲಾ ಅವರ ಜೊತೆ ಬೆಳೆಯುತ್ತಿದ್ದಳು. ಜೊತೆಗೆ ಅವರನ್ನೇ ತಾಯಿ‌ ಅಂದುಕೊಂಡಿದ್ದಳು. ಇದೀಗ ಈ ಪುಟಾಣಿಗೆ ಅವರೇ ಎಲ್ಲವೂ ಆಗಿದ್ದಾರೆ.

ಅಮ್ಮ ಹೋದ ಬಳಿಕ ಅಪ್ಪನೇ ಅವಳ ಸರ್ವಸ್ವವಾಗಿದ್ದರು. ಆದರೆ, ಈ ಕಂದಮ್ಮನಿಗೆ ಅಪ್ಪ ಇಲ್ಲ ಎಂಬ ಸತ್ಯವೇ ತಿಳಿದಿಲ್ಲ. ದಿನಕ್ಕೆ ನಾಲ್ಕೈದು ಬಾರಿ ಅಪ್ಪನ ನಂಬರಿಗೆ ಕರೆ ಮಾಡುತ್ತಾಳಂತೆ. ಅಪ್ಪ ಯಾಕೋ ಬ್ಯುಸಿ ಇರಬೇಕು ಅಂತಾ ಅವಳೇ ಅಂದುಕೊಂಡು ಸುಮ್ಮನಾಗುತ್ತಾಳಂತೆ. ಎಂಥಾ ವಿಪರ್ಯಾಸ. ಅಪ್ಪನಿಲ್ಲ ಎಂಬ ಕಟು ಸತ್ಯವೇ ಅರಿಯದ ಕಂದ ತನ್ನ ತಂದೆಯ ಬರುವಿಕೆಗಾಗಿ ಪರಿತಪಿಸುತ್ತಿದೆ. ಇತ್ತ ಅಮ್ಮನೂ ಇಲ್ಲದೇ ಅಪ್ಪನೂ ಇಲ್ಲದೇ ಈ ಕೂಸು ಅನಾಥವಾಗಿದೆ. ಇದಕ್ಕೆ ಅಲ್ಲವೇ ವಿಧಿಯಾಟ ಅನ್ನೋದು..

Last Updated : Jul 7, 2021, 3:57 PM IST

ABOUT THE AUTHOR

...view details