ರಾಮನಗರ : ನಿಧಿ ಆಸೆಗಾಗಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಖದೀಮರು 3 ಅಡಿಗೂ ಆಳವಾದ ಗುಂಡಿ ತೋಡಿ ಪರಾರಿಯಾಗಿದ್ದಾರೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಡಿಕೆಹೊಸಳ್ಳಿ ಗ್ರಾಮದ ಶ್ರೀ ಚನ್ನಪ್ಪಸ್ವಾಮಿ ದೇವಸ್ಥಾನದಲ್ಲಿ ನಿಧಿಯಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದ ಖದೀಮರು ಈ ಕೃತ್ಯವೆಸಗಿದ್ದಾರೆ.

ಶನಿವಾರ ಅಮಾವಾಸ್ಯೆ ಇದ್ದ ಕಾರಣ ಪ್ಲಾನ್ ಮಾಡಿಕೊಂಡಿದ್ದ ದುಷ್ಕರ್ಮಿಗಳು ನಿಧಿಯಾಸೆಗಾಗಿ ಪೂಜೆ ನಡೆಸಿ ಸುಮಾರು ಮೂರು ಅಡಿಗೂ ಹೆಚ್ಚು ಆಳಕ್ಕೆ ಗುಂಡಿ ಅಗೆದಿದ್ದಾರೆ. ಆದ್ರೆ ಯಾವುದೇ ನಿಧಿ ಸಿಗದೇ ಪರಾರಿಯಾಗಿದ್ದಾರೆ.
ಇದೇ ಗ್ರಾಮದ ಕೆಲವರಿಂದ ಕೃತ್ಯ ನಡೆದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.