ರಾಮನಗರ: 'ಬೈರಾಗಿ' ಸಿನಿಮಾ ಪ್ರಚಾರಕ್ಕಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ರಾಮನಗರಕ್ಕೆ ಆಗಮಿಸಿದ್ದರು. ನಟರಾದ ಡಾಲಿ ಧನಂಜಯ, ಪೃಥ್ವಿ ಅಂಬಾರ್ ಹಾಗು ನಿರ್ಮಾಪಕ ಕೃಷ್ಣ ಸಾರ್ಥಕ್ ಜೊತೆಗಿದ್ದರು.
ಕಾರ್ಯಕ್ರಮದಲ್ಲಿ 'ಅಪ್ಪು.. ಅಪ್ಪು' ಎಂದು ಅಭಿಮಾನಿಗಳು ಘೋಷಣೆ ಕೂಗಿದರು. ಆಗ ಶಿವಣ್ಣ ಪ್ರತಿಕ್ರಿಯಿಸಿ, ಪ್ರೀತಿ ಎದೆಯಲ್ಲಿರಬೇಕು, ಬಾಯಲ್ಲಿ ಅಲ್ಲ, ಬಾಯಲ್ಲಿ ತೋರಿಕೆಯಾಗುತ್ತದೆ. ಎದೆಯಲ್ಲಿದ್ದರೆ ಅದು ಭಕ್ತಿ, ಪ್ರೀತಿ, ಮಾನವೀಯತೆ ಆಗಲಿದೆ ಎಂದು ಕಿವಿಮಾತು ಹೇಳಿದರು.