ರಾಮನಗರ:ಖಾಸಗಿ ಶಾಲೆಗಳ ಶುಲ್ಕ ಪಾವತಿ ವಿಚಾರ ಸಂಬಂಧಿಸಿದಂತೆ ಸಚಿವ ಸುರೇಶ ಕುಮಾರ ವಿರುದ್ದ ಎಂಎಲ್ಸಿ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುಟ್ಟಣ್ಣ ಮಾತನಾಡಿದರು.
ಶಿಕ್ಷಣ ಸಚಿವರು ಈ ಸರ್ಕಾರದಲ್ಲಿ ನಿಷ್ಕ್ರಿಯರಾಗಿದ್ದಾರೆ. ಸಿಎಂ ಯಡಿಯೂರಪ್ಪನವರ ಮಾತಿಗೂ ಅವರು ಬೆಲೆ ಕೊಡುತ್ತಿಲ್ಲ. ಖಾಸಗಿ ಶಾಲಾ ಶಿಕ್ಷಕರು ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದಾರೆ. ಅವರ ಪರವಾಗಿ ಶಿಕ್ಷಣ ಸಚಿವರು ಯಾವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಹತ್ತಾರು ಸಭೆಗಳನ್ನ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.