ಕರ್ನಾಟಕ

karnataka

ETV Bharat / state

ಹೆಣ್ಣು ಮಕ್ಕಳಿಗೆ ನೋಟಿಸ್ ನೀಡಲು ಇಡಿಗೆ ತರಾತುರಿ ಏಕೆ? ಹೆಚ್​ಡಿಕೆ - ಇಡಿ ಸಮನ್ಸ್

ಡಿಕೆಶಿ ಕುಟುಂಬದ ಹೆಣ್ಣು ಮಕ್ಕಳಿಗೂ ನೋಟಿಸ್ ನೀಡಲು‌ ತರಾತುರಿ‌ ಬೇಕಿತ್ತಾ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ EDಯನ್ನು ಪ್ರಶ್ನಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

By

Published : Sep 11, 2019, 7:30 PM IST

ರಾಮನಗರ:ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯಗೂ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ, ಶಾಸಕ

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಡಿಕೆಶಿ ಕುಟುಂಬದ ಹೆಣ್ಣು ಮಕ್ಕಳಿಗೂ ನೋಟಿಸ್ ನೀಡಲು‌ ತರಾತುರಿ‌ ಬೇಕಿತ್ತಾ? ದೊಡ್ಡಮಟ್ಟದವರು ಇವರ ಕಣ್ಣಿಗೆ‌ ಬಿದ್ದಿಲ್ವಾ? ಅಲ್ಲದೆ ಇದ್ಯಾವುದೋ ಕೇಸ್ ಇಟ್ಟುಕೊಂಡು ಅವರ ಕುಂಟುಂಬದ ವಿರುದ್ಧ ಹೊರಟ್ಟಿದ್ದಾರೆ. ಇದರಲ್ಲಿ ಕೇಂದ್ರದ ಅಧಿಕಾರಿಗಳಿದ್ದಾರೋ, ಬೇರೆಯವರಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ತೋರಿಸಿದ್ರು.

ಅಲ್ಲದೆ ಬಿಜೆಪಿಯವರಿಗೆ ಗೊತ್ತು ಗುರಿಯಿಲ್ಲ. ಅವರು ಅಧಿಕಾರ ಮಾಡುತ್ತಿರುವ ವಿಧಾನ ನಿಮಗೆ ಗೊತ್ತಿದೆ. ನಾನು ಈ ಬಗ್ಗೆ ಚರ್ಚೆ ಮಾಡಲ್ಲ, ಜನರಿಗೆ ಈ ಸರ್ಕಾರದ ಪೆಟ್ಟು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ಎಚ್ಚರಿಕೆ ನೀಡಿದ್ರು.

ಇದೇ ವೇಳೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಗ್ಗೆ ಅನುಮಾನವೇ ಬೇಡ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ರು.

ABOUT THE AUTHOR

...view details