ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಉಕ್ರೇನ್ನಲ್ಲಿ ವಿದ್ಯಾಭ್ಯಾಸ ಮಾಡಲು ಹೋಗಿದ್ದು, ಯುದ್ಧಭೀತಿ ಎದುರಿಸುವಂತಾಗಿದೆ. ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ನಿವೇದಿತಾ ಹಾಗೂ ರಾಮನಗರದ ಐಜೂರು ಮೂಲದ ಆಯೆಷಾ ಉಕ್ರೇನ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ನಮ್ಮ ಚನ್ನಪಟ್ಟಣದ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ಉಕ್ರೇನ್ನಲ್ಲಿ ಸಿಲುಕಿದ್ದಾಳೆ. ನಾನು ಆ ವಿದ್ಯಾರ್ಥಿನಿಯ ಜತೆಗೆ ಮಾತನಾಡಿದ್ದೆ. ಬರಲು ಆಗುತ್ತಿಲ್ಲ, ಎಲ್ಲಾ ಏರ್ಪೋರ್ಟ್ಗಳು ಬಂದ್ ಆಗಿವೆ ಎಂದು ತಿಳಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾಹಿತಿ ನೀಡಿದರು.
ಉಕ್ರೇನ್ನಲ್ಲಿ ಸಿಲುಕಿದ ರಾಮನಗರದ ಇಬ್ಬರು ವಿದ್ಯಾರ್ಥಿಗಳ ಮಾಹಿತಿ ಕಲೆಹಾಕಿದ ಹೆಚ್ಡಿಕೆ ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ದ ಪ್ರಾರಂಭವಾಗಿದ್ದು, ಈಗಾಗಲೇ ರಾಜ್ಯದ ನೂರಾರು ವಿದ್ಯಾರ್ಥಿಗಳು ಕೂಡ ಸಿಲುಕುಕೊಂಡಿದ್ದಾರೆ. ಈ ಬಗ್ಗೆ ಅಲ್ಲಿನ ರಾಯಭಾರಿಗೆ ಸಂದೇಶ ರವಾನಿಸಿದ್ದೇನೆ. ಅಲ್ಲಿ ನಮ್ಮ ಕ್ಷೇತ್ರದ ಚನ್ನಪಟ್ಟಣದ ವಿದ್ಯಾರ್ಥಿನಿ ವ್ಯಾಸಂಗ ಮಾಡ್ತಿದ್ದಾಳೆ. ಇದಲ್ಲದೆ ರಾಜ್ಯದ ತುಂಬಾ ಜನ ವಿದ್ಯಾರ್ಥಿಗಳು, ವಿದ್ಯಾಭ್ಯಾಸಕ್ಕೆ ಹೋದವರು ಇದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರಲು ಸರ್ವಪ್ರಯತ್ನ: ಸಚಿವ ಕಾರಜೋಳ ಅಭಯ
ರಾಜ್ಯ ಸರ್ಕಾರ ಇದರ ಮಾಹಿತಿಯನ್ನು ನಿಧಾನವಾಗಿ ಕೊಡ್ತಿದೆ. ಆದರೆ, ಸರ್ಕಾರದ ಮಾಹಿತಿಗಿಂತಲೂ, ನನ್ನ ಬಳಿ ಇರುವ ಮಾಹಿತಿ ಸ್ಪೀಡಾಗಿದೆ ಎಂದು ಇದೇ ವೇಳೆ ಹೆಚ್ಡಿಕೆ ಹೇಳಿದರು.