ರಾಮನಗರ: ಸಿಎಂ ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಮಕ್ಕಳನ್ನು ದೇಶ ಕಾಯಲು ಕಳುಹಿಸುತ್ತಾರಾ? ಇಲ್ಲ, ಬಡವರು, ಹಸಿವಿನಿಂದ ನರಳುವವರು, ಶ್ರಮಿಕರು ಸೈನಿಕರಾಗಿ ಸೇರುತ್ತಾರೆ ಎಂದು ಹೇಳಿರುವ ನನ್ನ ಹೇಳಿಕೆಯಲ್ಲಿ ಯಾವ ತಪ್ಪಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ದೇಶ ಕಾಯೋಕೆ ಯಡಿಯೂರಪ್ಪ, ಈಶ್ವರಪ್ಪರ ಮಕ್ಕಳನ್ನು ಕಳುಹಿಸ್ತಾರಾ: ಹೆಚ್ಡಿಕೆ
ಬಡವರು, ಹಸಿವಿನಿಂದ ನರಳುವವರು, ಶ್ರಮಿಕರು ಸೈನ್ಯ ಸೇರುತ್ತಾರೆ ಅಂತಾ ನಾನು ಹೇಳಿರುವುದರಲ್ಲಿ ಯಾವ ಅಪರಾಧವಿಲ್ಲ ಎಂದು ಮಾಜಿ ಸಿಎಂ ಹೆಚ್ಡಿಕೆ ಸಮರ್ಥಿಸಿಕೊಂಡಿದ್ದಾರೆ.
ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ
ಬಿಡದಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಈಶ್ವರಪ್ಪ ನಾಲಿಗೆಗೆ ಕಡಿವಾಣ ಹಾಕಿಕೊಳ್ಳಬೇಕು. ಮಾತಿನ ಚಪಲ ತೀರಿಸಿಕೊಳ್ಳಲು ಮಾತನಾಡುವುದಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನ ಸಭೆಯಲ್ಲಿ ಕಲ್ಲು ಎಸೆದಿರುವ ಬಗ್ಗೆ ಆಗ ಏನನ್ನೂ ಹೇಳದೆ ಈಗ ಯಾಕೆ ಕೇಳುತ್ತಿದ್ದಾರೆ. ಇಲ್ಲಿ ಒಡೆದು ಆಳಲು ಹೊರಟಿದ್ದಾರೆ. ಅಧಿಕಾರಗಳು ದಾರಿ ತಪ್ಪಬಾರದು ಎಂದು ಎಚ್ಚರಿಕೆ ನೀಡಿದರು.