ರಾಮನಗರ: ಇಡಿ, ಐಟಿ, ಸಿಬಿಐ ಸೇರಿದಂತೆ ದೇಶದ ಇಡೀ ಆಡಳಿತವೇ ಬಿಜೆಪಿಯ ಕಪಿಮುಷ್ಠಿಯಲ್ಲಿದೆ ಎಂದು ಸಂಸದ ಡಿ ಕೆ ಸುರೇಶ್ ಆರೋಪಿಸಿದರು.
ಇಡಿ, ಐಟಿ, ಸಿಬಿಐ ಬಿಜೆಪಿಯ ಕಪಿಮುಷ್ಠಿಯಲ್ಲಿವೆ .. ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಆರೋಪ
ವ್ಯಾಪಾರ, ವ್ಯವಹಾರ ನಡೆಸುವಾಗ ಎಲ್ಲಾ ಕಾನೂನಾತ್ಮಕವಾಗಿ ನಡೆದುಕೊಂಡಿದ್ದೇವೆ. ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ಮಾಡೋದು ಇಲ್ಲ. ನಾವು ಬಿಜೆಪಿ ಸೇರದ ಪರಿಣಾಮ ಸಂಕಷ್ಟದಲ್ಲಿದ್ದೇವೆ ಅಂತಾ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ಡಿ.ಕೆ.ಸುರೇಶ್
ಕನಕಪುರದಲ್ಲಿ ಮಾತನಾಡಿದ ಅವರು, ಕೋರ್ಟ್ ಮೇಲೆ ಮಾತ್ರ ವಿಶ್ವಾಸವಿದೆ. ಇನ್ನುಳಿದ ಎಲ್ಲಾ ಸಂಸ್ಥೆ, ಆಡಳಿತಗಳು ಬಿಜೆಪಿ ಪಾಲಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವ್ಯಾಪಾರ, ವ್ಯವಹಾರ ನಡೆಸುವಾಗ ಎಲ್ಲಾ ಕಾನೂನಾತ್ಮಕವಾಗಿ ನಡೆದುಕೊಂಡಿದ್ದೇವೆ. ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ಮಾಡೋದು ಇಲ್ಲ. ನಾವು ಬಿಜೆಪಿ ಸೇರದ ಪರಿಣಾಮ ಸಂಕಷ್ಟದಲ್ಲಿದ್ದೇವೆ. ಅಲ್ಲದೆ ಮುಂದೆ ಮಾಜಿ ಮುಖ್ಯಮಂತ್ರಿಗಳು ಸೇರಿ ಇತರ ಕಾಂಗ್ರೆಸ್ ನಾಯಕರ ಮೇಲೂ ಕೂಡ ಸೇಡಿನ ರಾಜಕಾರಣ ನಡೆಸುತ್ತಾರೆ ಎಂದು ಕಿಡಿಕಾರಿದರು.