ರಾಮನಗರ :ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಈಗಾಲೇ ಕಂಪ್ಲಿ ಎಂಎಲ್‌ಎ ಗಣೇಶ್‌ಗೆ ಜಾಮೀನು ಸಿಕ್ಕಿದೆ. ಇದೇ ಹಿನ್ನೆಲೆಯಲ್ಲಿ ಇಂದು ರಾಮನಗರ ಸ್ಥಳೀಯ ಕೋರ್ಟ್‌ಗೆ ದಾಖಲಾತಿಗಳನ್ನ ಹಾಜರುಪಡಿಸಲು ಕಂಪ್ಲಿ ಗಣೇಶ್ ನಗರದ ಸಿಜೆಎಂ ಕೋರ್ಟ್‌ಗೆ ಹಾಜರಾಗಿದ್ದರು.
ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಕೇಸ್.. ಕೊರ್ಟ್‌ಗೆ ದಾಖಲಾತಿ ಸಲ್ಲಿಸಿದ ಕಂಪ್ಲಿ ಶಾಸಕ ಗಣೇಶ್
ಈಗಲ್‌ಟನ್ ರೆಸಾರ್ಟ್‌ನಲ್ಲಿನ ಕಾಂಗ್ರೆಸ್ ಶಾಸಕರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಕಂಪ್ಲಿ ಎಂಎಲ್‌ಎ ಗಣೇಶ್‌ಗೆ ಜಾಮೀನು ಮಂಜೂರಾದ ಹಿನ್ನೆಲೆ ರಾಮನಗರ ಸಿಜೆಎಂ ಕೋರ್ಟ್‌ಗೆ ದಾಖಲಾತಿಗಳನ್ನ ಸಲ್ಲಿಸಿದರು.
ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್‌ನಲ್ಲಿ ತಂಗಿದ್ದ ವೇಳೆ ಕಂಪ್ಲಿ ಶಾಸಕ ಗಣೇಶ್, ಎಂಎಲ್‌ಎ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಮನಗರ ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನು ಸಿಗದೆ ಇದ್ದದ್ದರಿಂದ ಹೈಕೊರ್ಟ್‌ನಲ್ಲಿ ಬೇಲ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಆದರೆ, ಇತ್ತೀಚೆಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ವಕೀಲರೊಂದಿಗೆ ಕೋರ್ಟ್‌ಗೆ ಹಾಜರಾಗಿದ್ದ ಗಣೇಶ್, ದಾಖಲಾತಿ ಸಲ್ಲಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಹೊರ ನಡೆದರು.