ರಾಮನಗರ :ಎಸ್ಪಿ ಪುರಷೊತ್ತಮ್ ವಿರುದ್ಧ ದೂರು ದಾಖಲಾಗಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ಯಾವ ವಿಚಾರದಲ್ಲಿ ಅವರ ಹೆಸರು ಕೇಳಿ ಬರುತ್ತಿದೆ ಎಂಬುದು ಗೊತ್ತಿಲ್ಲ. ನಾನು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆ ನಡೆಸಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರ ವಿಶ್ವಾಸದಿಂದ ಚುನಾವಣೆ ನಡೆಸಿಕೊಂಡು ಬಂದಿದ್ದೇನೆ. ಕಾರ್ಯಕರ್ತರು ಚುನಾವಣೆಯಲ್ಲಿ ಮತ ಹಾಕಿಸುತ್ತಾರೆ.
ಅಧಿಕಾರಿಗಳು ಮತ ಹಾಕಿಸಲು ಸಾಧ್ಯವಾಗುತ್ತಾ?. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದೂರು ಕೊಟ್ಟಿದ್ದಾರೋ ಏನೋ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ತನಿಖೆ ನಂತರ ಸತ್ಯಾಂಶ ಹೊರ ಬರಲಿದೆ ಎಂದರು.
ಪರಿಷತ್ ಎಲೆಕ್ಷನ್ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ:ವಿಧಾನಪರಿಷತ್ ಚುನಾವಣೆ 2023ರ ದಿಕ್ಸೂಚಿ ಎನ್ನಲು ಸಾಧ್ಯವಿಲ್ಲ. ಆದರೆ, ಪರಿಷತ್ ಫಲಿತಾಂಶ 2023ರ ಚುನಾವಣೆಗೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮಡಿಸುತ್ತದೆ.