ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢ, 2023ರ ಚುನಾವಣೆಯಲ್ಲಿ ಬದಲಾವಣೆ: ಸಂಸದ ಡಿ.ಕೆ.ಸುರೇಶ್ - ಈಗಲ್ ಟನ್ ರೆಸಾರ್ಟ್ ವಿವಾದದ ಬಗ್ಗೆ ಮಾತನಾಡಿದ ಡಿ ಕೆ ಸುರೇಶ್​​

ಚುನಾವಣೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲಿನ ಕಾರಣದ ಬಗ್ಗೆ ನಮ್ಮ ನಾಯಕರು ಚರ್ಚೆ ಮಾಡ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢವಾಗಿದೆ. 2023ರ ಚುನಾವಣೆಯಲ್ಲಿ ಬದಲಾವಣೆ ಆಗುತ್ತದೆ ಎಂದು ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್​ ಹೇಳಿದ್ದಾರೆ.

-d-k-suresh
ಸಂಸದ ಡಿ.ಕೆ. ಸುರೇಶ್

By

Published : Mar 11, 2022, 5:51 PM IST

Updated : Mar 11, 2022, 6:00 PM IST

ರಾಮನಗರ: ರಾಜ್ಯದಲ್ಲಿ ಕಾಂಗ್ರೆಸ್ ಕುಗ್ಗಿದೆ ಎಂಬುದು ಸುಳ್ಳು. ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢವಾಗಿದೆ. 2023ರ ಚುನಾವಣೆಯಲ್ಲಿ ಬದಲಾವಣೆ ಆಗುತ್ತದೆ ಎಂದು ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿನ ಸೋಲಿನ ಕುರಿತು ಮಾತನಾಡಿದ ಅವರು, ಚುನಾವಣೆಗಳಲ್ಲಿ ಸೋಲು ಗೆಲುವು ಸಾಮಾನ್ಯವಾಗಿರುತ್ತದೆ‌. ಸೋಲಿನ ಕಾರಣದ ಬಗ್ಗೆ ನಮ್ಮ ನಾಯಕರು ಚರ್ಚೆ ಮಾಡ್ತಾರೆ. ಪಂಜಾಬ್​ನಲ್ಲಿ 6 ತಿಂಗಳಿಂದ ಗೊಂದಲ ಸೃಷ್ಟಿಯಾಗಿತ್ತು, ಹೀಗಾಗಿ ಹಿನ್ನಡೆಯಾಗಿದೆ. ಅದನ್ನು ಸರಿಪಡಿಸುವ ಕೆಲಸ ಆಗುತ್ತೆ ಎಂದರು.


ಈಗಲ್ ಟನ್ ರೆಸಾರ್ಟ್ ವಿವಾದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸಿದ್ದರಾಮಯ್ಯ - ಕುಮಾರಸ್ವಾಮಿ ನಡುವೆ ವಾಗ್ವಾದ ನಡೆದ ವಿಚಾರವಾಗಿ ಮಾತನಾಡಿದ ಅವರು, ದಂಡ ಹೆಚ್ಚಾಗಿ ಹಾಕಿರುವುದಕ್ಕೆ ಅವರಿಗೇನು ತೊಂದರೆ ಆಗಿದೆ?. ಅವರೇ 27 ಎಕರೆ ಸರ್ಕಾರಿ ಜಾಗವನ್ನು ಸರ್ಕಾರಕ್ಕೆ ಬರೆಸಿಕೊಟ್ಟರೆ ಸಂತೋಷ. ರೈತರು ಕಷ್ಟದಲ್ಲಿರುವ ಬಗ್ಗೆ ಮಾತನಾಡಿದ್ದರೆ ಉತ್ತರ ಕೊಡ್ತಿದ್ದೆ. ಅವರ ಬಣ್ಣ ಬಯಲಾಗಿರುವ ಸಂದರ್ಭದಲ್ಲಿ ನಾನೇಕೆ ಮಾತನಾಡಲಿ?. ಯಾರದ್ದೋ ಪರವಾಗಿ ಅವರು ಮಾತನಾಡಿದ್ದಾರೆ. ಕಾನೂನಿನ ಪ್ರಕಾರವಾಗಿ ದಂಡ ವಿಧಿಸಿದ್ದಾರೆ. ಜಿಲ್ಲಾಧಿಕಾರಿ - ಸರ್ಕಾರ ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ ಅಧಿಕಾರ ಯಾರಿಗೆ?: ಬಿಜೆಪಿ-ಕಾಂಗ್ರೆಸ್-ಜೆಡಿಎಸ್‍ ನಾಯಕರು ಸದನದಲ್ಲಿ ಹೇಳಿದ್ದೇನು?

ರೆಸಾರ್ಟ್​ನವರು ಯಾವ ರೇಟ್​ಗೆ ಸೈಟ್ ಮಾಡಿದ್ದರು. ಅದರ ಆಧಾರದ ಮೇಲೆ ದಂಡ ವಿಧಿಸಿದ್ದಾರೆ. ಇದರಲ್ಲಿ ಪಕ್ಷ - ನಾಯಕರ ಪಾತ್ರ ಏನೂ ಇಲ್ಲ. ಮುಖ್ಯಮಂತ್ರಿಗೆ ಹೇಳಿ ಬರೆಸಿಕೊಡಲಿ, ನಮ್ಮ ತಕರಾರಿಲ್ಲ ಎಂದು ರಾಮನಗರದ ವಿಜಯಪುರ ಗ್ರಾಮದಲ್ಲಿ ಡಿ.ಕೆ.ಸುರೇಶ್ ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Last Updated : Mar 11, 2022, 6:00 PM IST

ABOUT THE AUTHOR

...view details