ರಾಮನಗರ:ಚನ್ನಪಟ್ಟಣದಲ್ಲಿ ಸ್ವಾಮೀಜಿಯೊಬ್ಬರು ಕಾಣಿಸಿಕೊಂಡಿದ್ದು, ಶಿರಿಡಿ ಸಾಯಿಬಾಬಾರ ಅವತಾರವೆಂದು ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಚಿಕ್ಕಮಳೂರಿನಲ್ಲಿ ನಡೆದಿದೆ.
ಚನ್ನಪಟ್ಟಣದಲ್ಲಿ ಪವಾಡ ಪುರುಷ... ಸಾಯಿಬಾಬಾ ಅವತಾರವೆಂದು ಮುಗಿಬಿದ್ದ ಭಕ್ತರು!
ಚನ್ನಪಟ್ಟಣದಲ್ಲಿ ಸ್ವಾಮೀಜಿಯೊಬ್ಬರು ಕಾಣಿಸಿಕೊಂಡಿದ್ದು, ಶಿರಿಡಿ ಸಾಯಿಬಾಬಾರ ಅವತಾರವೆಂದು ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಚಿಕ್ಕಮಳೂರಿನಲ್ಲಿ ನಡೆದಿದೆ.
ಬರಿಗೈನಲ್ಲಿ ಭಕ್ತರಿಗೆ ವಿಭೂತಿ, ತಾಯತ, ಸಿಹಿ ತಿನಿಸು ನೀಡುತ್ತಿರುವ ಪ್ರೇಮ್ ಸಾಯಿಬಾಬಾ ಎಂಬ ಸ್ವಾಮೀಜಿಯೊಬ್ಬರು ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಚಿಕ್ಕಮಳೂರಿನ ಸ್ಮಶಾನದಲ್ಲಿ ಪುಟ್ಟಸ್ವಾಮಿಗೌಡ ಎಂಬುವವರ ಸಮಾಧಿ ಬಳಿ ಇದ್ದ ಪ್ರೇಮ್ ಸಾಯಿ, ಮೂರು ದಿನಗಳಿಂದ ಮಂಗಳವಾರಪೇಟೆಯ ಪ್ರಕಾಶ್ ಎಂಬುವವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಬೆಳಿಗ್ಗೆ ಹಾಗೂ ಸಾಯಂಕಾಲದ ವೇಳೆ ದರ್ಶನ ಹಾಗೂ ಭಜನೆ ಮಾಡುತ್ತಿರುವ ಇವರು, ಹಿಂದಿ, ಇಂಗ್ಲಿಷ್ ಹಾಗೂ ಸ್ವಲ್ಪ ಕನ್ನಡದಲ್ಲಿ ಮಾತನಾಡುತ್ತಾರೆ.
ಅಲ್ಲದೆ ಸಮಸ್ಯೆಗಳನ್ನು ಹೇಳಿಕೊಂಡು ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿಭೂತಿ, ಕೆಲವರಿಗೆ ಸಾಯಿ ಬಾಬಾ ಪೋಟೋ, ತಾಯತ, ಸಿಹಿ ತಿನಿಸು ನೀಡುತ್ತಿದ್ದು, ಇವರ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ.