ಕರ್ನಾಟಕ

karnataka

ETV Bharat / state

ಅಳಿವಿನಂಚಿನಲ್ಲಿರುವ ಪಕ್ಷಿಗಳ ಉಳಿವಿಗಾಗಿ ಶ್ರಮಿಸುತ್ತಿರುವ ಪರಿಸರ ಪ್ರೇಮಿ

ರಾಮನಗರ ಜಿಲ್ಲೆ ಕನಕಪುರ ನಿವಾಸಿಯಾದ ಮರಸಪ್ಪ ರವಿಯವರು ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳಂತಹ ಪಕ್ಷಿಗಳ ಉಳಿವಿಗೆ ಶ್ರಮಿಸುತ್ತಿದ್ದು, ಅವುಗಳಿಗಾಗಿಯೇ ಮನೆಯ ಎದುರು ಗೂಡು ನಿರ್ಮಿಸಿ ಪಕ್ಷಿಗಳಿಗೆ ಆಶ್ರಯದಾತರಾಗಿದ್ದಾರೆ.

ramnagar
ಮರಸಪ್ಪ ರವಿ

By

Published : Feb 8, 2021, 1:23 PM IST

ರಾಮನಗರ:ಇಲ್ಲೊಬ್ಬರು ಪರಿಸರ ಪ್ರೇಮಿಗೆ ಪ್ರಾಣಿ ಪಕ್ಷಿಗಳು ಎಂದರೆ ಬಹಳಷ್ಟು ಪ್ರೀತಿ. ಅಳಿವಿನಂಚಿನಲ್ಲಿರುವ ಪಕ್ಷಿಗಳ ಉಳಿವಿಗಾಗಿ ಶ್ರಮಿಸುತ್ತಿರುವ ಪ್ರೇಮಿ. ಪಕ್ಷಿಗಳಿಗಾಗಿಯೇ ಮನೆಯ ಎದುರು ಗೂಡು ನಿರ್ಮಿಸಿ ಪಕ್ಷಿಗಳಿಗೆ ಆಶ್ರಯದಾತರಾಗಿದ್ದಾರೆ. ಮತ್ತೊಂದೆಡೆ ಲಯನ್ಸ್ ಕ್ಲಬ್ ವತಿಯಿಂದ ಕೊರೊನಾ ಲಾಕ್​​ಡೌನ್ ವೇಳೆ ಅನೇಕ ಸಾಮಾಜಿಕ ಚಟುವಟಿಕೆ ನಡೆಸಿ ಬಡವರಿಗೆ ಆಶ್ರಯದಾತರಾಗಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ನಿವಾಸಿಯಾದ ಮರಸಪ್ಪ ರವಿ

ರಾಮನಗರ ಜಿಲ್ಲೆಯ ಕನಕಪುರ ನಿವಾಸಿಯಾದ ಮರಸಪ್ಪ ರವಿಯವರು ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳಂತಹ ಪಕ್ಷಿಗಳ ಉಳಿವಿಗೆ ಶ್ರಮಿಸುತ್ತಿದ್ದಾರೆ.‌ ತಮ್ಮ ಪುಟ್ಟ ಮನೆಯ ಮುಂಭಾಗ ಬೊಂಬಿನಲ್ಲಿ ರಂಧ್ರಗಳನ್ನು ಕೊರೆದು ಗುಬ್ಬಚ್ಚಿಗಳು ನೆಲೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೇ ನಿತ್ಯ ಪಕ್ಷಿಗಳಿಗೆ ಧಾನ್ಯ, ಕಾಳುಗಳನ್ನು ನೀಡಿ ಪೋಷಿಸುತ್ತಿದ್ದಾರೆ. ಮನೆಯ ಸುತ್ತಲಿನ ಲಭ್ಯ ಇರುವ ಅಲ್ಪ ಸ್ಥಳದಲ್ಲಿ ನಂದನವನವನ್ನಾಗಿಸಿಕೊಂಡು ಪಕ್ಷಿಗಳಿಗೆ ಅನುಕೂಲವಾಗಲೆಂದೇ ಮಾವು, ಸೀಬೆ, ದಾಳಿಂಬೆ, ಅಂಜೂರ, ಸಪೋಟಾ, ಬೆಣ್ಣೆ ಹಣ್ಣು ಸೇರಿದಂತೆ ಮೊದಲಾದ ಗಿಡಗಳನ್ನು ಬೆಳೆಸಿದ್ದಾರೆ. ಇವರ ಕಿರು ಉದ್ಯಾನದಲ್ಲಿ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಕಾಜಾಣ, ಕೋಗಿಲೆ, ಗಿಣಿ, ಅಪರೂಪದ ಸನ್​ಬರ್ಡ್, ದರ್ಜಿ ಹಕ್ಕಿಗಳು ಬರುತ್ತವೆ.

ಇನ್ನು ಕೊರೊನಾ ಲಾಕ್​ಡೌನ್ ವೇಳೆ ಕನಕಪುರ ‌ಲಯನ್ಸ್ ಕ್ಲಬ್ ಅಧ್ಯಕ್ಷರಾಗಿದ್ದಾಗ ಅನೇಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಪರಿಸರ ಜಾಗೃತಿ ಮೂಡಿಸಲು ಕನಕಪುರ ಕ್ಷೇತ್ರದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟಿದ್ದಾರೆ. ಹಾಗೆಯೇ ಹಸಿವಿನಿಂದ ಬಳಲುತ್ತಿದ್ದ ಸಾವಿರಾರು ಕುಟುಂಬಗಳಿಗೆ ಮಾಸ್ಕ್ ಜೊತೆಗೆ ಆಹಾರ ಸಾಮಗ್ರಿ ಕಿಟ್​ಗಳನ್ನು ಕೂಡ ವಿತರಣೆ ಮಾಡಿದ್ದಾರೆ. ಒಂದೆಡೆ ಅಳಿವಿನಂಚಿನಲ್ಲಿರುವ ಪಕ್ಷಿಗಳ ಆಶ್ರಯದಾತರಾಗಿ, ಮತ್ತೊಂದೆಡೆ ಹಸಿವಿನಿಂದ ಬಳಲುತ್ತಿದ್ದ ಬಡ ಕುಟುಂಬಗಳಿಗೆ ಆಶಾಕಿರಣರಾಗಿದ್ದಾರೆ.

ABOUT THE AUTHOR

...view details