ಕರ್ನಾಟಕ

karnataka

ETV Bharat / state

ಬುದ್ಧಿಮಾತು ಕೇಳದ ಪ್ರೇಮಿ... ಮುದಗಲ್ಲನಲ್ಲಿ ಯುವತಿ ಮನೆಗೆ ಹೋಗಿ ಹೆಣವಾದ ಯುವಕ - lover murdered

ಅನ್ಯ ಕೋಮಿನ ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

murdered Young man murdered for loving other Religion girl
ಬುದ್ಧಿಮಾತು ಹೇಳಿದರೂ ಕೇಳದೆ ಪ್ರೀತಿಸಲು ಮುಂದಾದ ಪ್ರೇಮಿಯ ಕೊಲೆ

By

Published : May 15, 2020, 5:39 PM IST

ರಾಯಚೂರು:ಜಿಲ್ಲೆಯ ಲಿಂಗಸುಗೂರು ತಾಲೂಕು ಮುದಗಲ್ಲ ಸಮೀಪದ ಪೈಗಂಬರ ನಗರದಲ್ಲಿ ನೆತ್ತರು ಹರಿದಿದೆ. ಯುವಕನಿಗೆ ಬುದ್ಧಿಮಾತು ಹೇಳಿದರೂ ಇನ್ನೊಂದು ಕೋಮಿನ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದೇ ಯುವಕನ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ.

ಗುರುವಾರ ರಾತ್ರಿ ಯುವತಿ ಮನೆಗೆ ತೆರಳಿದ್ದ ಮೆಹಬೂಬಸಾಬ (25) ಎಂಬಾತನನ್ನು ಯುವತಿ ಮನೆಯವರು ಕೊಲೆ ಮಾಡಿದ್ದಾರೆ ಎಂದು ಮೃತನ ಸಹೋದರ ಖಾಜಾಸಾಬ ದೂರು ನೀಡಿದ್ದಾರೆ. ಹನುಮಂತಪ್ಪ ಚಲವಾದಿ ಸೇರಿದಂತೆ ಹತ್ತು ಜನರ ವಿರುದ್ಧ ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್​ಪಿ ಎಸ್.ಎಸ್. ಹಳ್ಳೂರು, ಸಿಪಿಐ ದೀಪಕ್​ ಭೂಸರೆಡ್ಡಿ, ಪಿಎಸ್ಐ ಡಾಕೇಶ್​ ನೇತೃತ್ವದಲ್ಲಿ ಕೆಲವರನ್ನು ಬಂಧಿಸಲಾಗಿದೆ. ಈ ಕುರಿತಂತೆ ವಿಚಾರಣೆ ಚುರುಕುಗೊಂಡಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.

ABOUT THE AUTHOR

...view details